More

    ಬಂಡಾಯದ ಬೆನ್ನಲ್ಲೇ ಕೆ.ಎಸ್.ಈಶ್ವರಪ್ಪ ವಿವಿಧ ಸಮಾಜದ ಮುಖಂಡರ ಭೇಟಿ; ಸ್ಪರ್ಧೆ ಕುರಿತು ಚರ್ಚೆ

    ಸಾಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಶುಕ್ರವಾರ ಘೋಷಣೆ ಮಾಡಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶನಿವಾರ ಸಾಗರದ ಶಂಕರಮಠ ಹಾಗೂ ವರದಹಳ್ಳಿಯ ಶ್ರೀಧರ ಆಶ್ರಮಕ್ಕೆ ಭೇಟಿ ನೀಡಿ ದರ್ಶನಾಶೀರ್ವದ ಪಡೆದರು. ಇದೇ ವೇಳೆ ವಿವಿಧ ಸಮಾಜದ ಪ್ರಮುಖರ ಮನೆಗಳಿಗೂ ಭೇಟಿ ನೀಡಿ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶುಕ್ರವಾರ ಪ್ರಮುಖರು ಹಾಗೂ ಅಭಿಮಾನಿಗಳ ಸಭೆಯಲ್ಲಿ ಘೋಷಣೆ ಮಾಡಿದ್ದೇನೆ. ನಂತರ ಅಭೂತಪೂರ್ವವಾದ ಬೆಂಬಲ ಎಲ್ಲೆಡೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿಗೆ ಭೇಟಿ ನೀಡಿ ವಿವಿಧ ಸಮಾಜದ ಮುಖಂಡರ ಜತೆಯಲ್ಲಿಯೂ ಚರ್ಚೆ ನಡೆಸಿದ್ದೇನೆ. ಹಿಂದು ಧರ್ಮ ಮತ್ತು ಭಾರತ ದೇಶವನ್ನು ವಿಶ್ವಗುರುವಾಗಿಸಬೇಕು ಎನ್ನುವ ಉದ್ದೇಶದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
    ಬ್ರಾಹ್ಮಣ ಸಮುದಾಯದ ಮುಖಂಡ ಮಾ.ಸ.ನಂಜುಂಡಸ್ವಾಮಿ, ಬಿಜೆಪಿ ಪ್ರಮುಖರಾದ ಕೆ.ಎಸ್.ಈಶ್ವರಪ್ಪ ಅವರಿಗೆ ಅನ್ಯಾಯವಾಗಿರುವ ಈ ಹೊತ್ತಿನಲ್ಲಿ ನಾವು ಅವರ ಜತೆ ನಿಲ್ಲುತ್ತೇವೆ. ಈಶ್ವರಪ್ಪ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮ ಹಾಗೂ ಮಗನ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
    ಪ್ರಮುಖರಾದ ಅಶೋಕ್ ಭಟ್, ಸುದರ್ಶನ್, ಎಸ್.ವಿ.ಕೃಷ್ಣಮೂರ್ತಿ, ವೈ.ಮೋಹನ್, ಎಸ್.ಎಲ್.ಮಂಜುನಾಥ್, ವಸಂತಕುಮಾರ್, ಗೋಪಾಲ್, ಟಿ.ವಿ.ಪಾಂಡುರಂಗ, ಗುಂಡಪ್ಪ, ಸತೀಶ್ ಗೌಡ, ಪರಮಾತ್ಮ, ಗಜಾನನ ಜೋಯ್ಸ, ರಘುನಾಥ್, ಬದರಿನಾಥ್ ಇತತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts