More

    ರೈತ ಹೋರಾಟ ಬೆಂಬಲಿಸಿ 20ಕ್ಕೆ ಫ್ರೀಡಂ ಪಾರ್ಕ್​ ಎದುರು ಪ್ರತಿಭಟನೆ

    ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಜ.20ರಂದು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದರು.

    ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ಬದುಕನ್ನು ಹಾಳು ಮಾಡಲಾಗುತ್ತಿದೆ. ಕಳೆದ 50 ದಿನಗಳಿಂದ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ಬಾರಿ ನಡೆಸಿದ ಮಾತುಕತೆಯೂ ವಿಫಲವಾಗಿದ್ದು ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    20ರಂದು ಬೆಂಗಳೂರಿನ ಫ್ರೀಡಂಪಾರ್ಕ್ ಎದುರು ಪ್ರತಿಭಟನೆ ನಡೆಸಲಾಗುವುದು. ಆನಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಇದನ್ನು ರಾಜಭವನಕ್ಕೆ ಮುತ್ತಿಗೆ ಎಂದಾದರೂ ಅಥವಾ ರಾಜಭವನ ಚಲೋ ಎಂದಾದರೂ ಸರ್ಕಾರ ಅರ್ಥೈಸಿಕೊಳ್ಳಬಹುದು. ಒಟ್ಟಾರೆ ಕಾಂಗ್ರೆಸ್ ಈ ವಿಚಾರದಲ್ಲಿ ರೈತರ ಪರವಾಗಿ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

    ಜಿಡಿಪಿಯು 19ರಿಂದ 17ಕ್ಕೆ ಕುಸಿದಿದ್ದು ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಭತ್ತ, ಜೋಳ ಸೇರಿ 25 ರೈತ ಉತ್ಪನ್ನಗಳಿಗೆ ಎಂಎಸ್​ಪಿ ದರ(ಕನಿಷ್ಠ ಬೆಂಬಲ ಬೆಲೆ)ವನ್ನು ಬದಲಾವಣೆ ಮಾಡಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಎಂಎಸ್​ಪಿ ಇದ್ದರೆ ಮಸೂದೆಯಲ್ಲೇ ಸ್ಪಷ್ಟತೆ ಪಡಿಸಬಹುದು. ಆದರೆ ಅದ್ಯಾವುದನ್ನೂ ಮಾಡದೆ ಹೊಸ ಮಸೂದೆಗಳನ್ನು ಅಂಬಾನಿ, ಅದಾನಿಗೋಸ್ಕರ ತರುತ್ತಿದ್ದಾರೆ ಎಂದು ಆರೋಪಿಸಿದರು.

    ಈಗಾಗಲೇ ಎಪಿಎಂಸಿಗಳನ್ನು ಹಾಳು ಮಾಡಿರುವ ಕೇಂದ್ರ ಸರ್ಕಾರ ರೈತರ ಉತ್ಪನ್ನಗಳ ಮೇಲಿನ ಬೆಲೆ ನಿಯಂತ್ರಣಕ್ಕೆ ಕಾಪೋರೇಟ್ ಕಂಪನಿಗಳನ್ನು ತರುವ ಹುನ್ನಾರ ನಡೆಸಿದೆ ಎಂಬುದು ಸ್ಪಷ್ಟ ಎಂದರು.

    ಶಾಸಕ ಬಿ.ಕೆ.ಸಂಗಮೇಶ್ವರ್, ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts