More

    ಶತಾಯುಷಿ ವೇದ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ ನಿಧನ; ಸಂಜೆ ಅಂತ್ಯಕ್ರಿಯೆ

    ಬೆಂಗಳೂರು: ಶತಾಯುಷಿ, ಖ್ಯಾತ ಬರಹಗಾರ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ ಇಂದು (ಫೆ.27) ಮುಂಜಾನೆ ವಿಧಿವಶರಾಗಿದ್ದಾರೆ. ಇವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು.

    ಚಿಂತಕರು, ವೇದಪರಿಣತರು, ವೇದ ವಿದ್ವಾಂಸರೂ ಆಗಿದ್ದ ಸುಧಾಕರ ಚತುರ್ವೇದಿ ಅವರು 1897ರ ಏಪ್ರಿಲ್​ನಲ್ಲಿ ಜನಿಸಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

    ಅವರು ನಾಲ್ಕು ವೇದಗಳಿಗೂ ಭಾಷ್ಯ ಬರೆದಿದ್ದರು. ಇದು ದೇಶದಲ್ಲಿಯೇ ಅಪರೂಪದ ವಿಚಾರ ಎನ್ನಲಾಗಿದೆ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಸೇರಿ ಸುಮಾರು 50 ಕೃತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಇವರು 12 ವರ್ಷಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು.

    ಜಯನಗರದ ಕೃಷ್ಣಸೇವಾಶ್ರಮದ ಎದುರು ಇವರ ನಿವಾಸವಿದೆ. ಇಂದು ಸಂಜೆ 4ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts