More

    ಜೀತ ಪದ್ಧತಿ ಮುಕ್ತಿಗೊಳಿಸಿ

    ಚಿತ್ರದುರ್ಗ: ಜೀತಕ್ಕೆ ಸಿಲುಕಿ ನೊಂದವರ ಕಣ್ಣೀರು ಒರೆಸಲು ಅದರಿಂದ ಮುಕ್ತಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಪ್ರಾಮಾಣಿಕವಾಗಿ ಶ್ರಮಿಸಿದಲ್ಲಿ ಇದನ್ನು ಸಂಪೂರ್ಣ ತೊಡೆದು ಹಾಕಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜೀತ ಪದ್ಧ್ದತಿ ನಿರ್ಮೂಲನಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಕೂಲಿ, ವೇತನ ರಹಿತ, ಬಲವಂತದ ದುಡಿಮೆಗೆ ಸಿಲುಕಿದ ವ್ಯಕ್ತಿಗಳನ್ನು ರಕ್ಷಿಸಿ, ಪುರ್ನವಸತಿ ಕಲ್ಪಿಸಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಸಂಪೂರ್ಣ ನಿರ್ಮೂಲನೆಗೆ ಮುಂದಾಗಿ ಎಂದು ಸೂಚಿಸಿದರು.

    ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಜೀತ ವಿಮುಕ್ತಿ ಪ್ರತಿಜ್ಞೆ ಬೋಧಿಸಿ, ಪುನರ್ವಸತಿ ಕುರಿತಾದ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದರು.
    ಡಿಸಿ ಕಚೇರಿ ಸಹಾಯಕ ನಾಗರಾಜ್, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್, ಶಿರಸ್ತೇದಾರ್ ವನಜಾಕ್ಷಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts