More

    ಉಚಿತ ತಿಂಡಿ, ಜಿಮ್‌, ಮಲಗುವ ವ್ಯವಸ್ಥೆ…ಅಬ್ಬಾ, ಈ ಕಂಪನಿಯ ಉದ್ಯೋಗಿಗಳಿಗೆ ಇನ್ನು ಏನೆನೆಲ್ಲಾ ಸವಲತ್ತುಗಳಿವೆ ಗೊತ್ತಾ?

    ಬೆಂಗಳೂರು: ಕಂಪನಿಗಳು ತಮ್ಮ ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲು ವಿವಿಧ ಸೌಲಭ್ಯಗಳನ್ನು ನೀಡುತ್ತವೆ. ಉತ್ತಮ ಕೆಲಸ-ಜೀವನ ಬ್ಯಾಲೆನ್ಸ್ ಇದ್ದಾಗ ಉದ್ಯೋಗಿಗಳು ಸಹ ಚೆನ್ನಾಗಿ ಕಾರ್ಯನಿರ್ವಹಿಸುತ್ತಾರೆ. ಕಂಪನಿಗಳೂ ಹೆಚ್ಚು ಪ್ರಯೋಜನ ಪಡೆಯುತ್ತವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ. ಅಂದಹಾಗೆ ಅನೇಕ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ನೀಡಿ ಪ್ರಸಿದ್ಧವಾಗಿವೆ. ಅವುಗಳಲ್ಲಿ ಮೈಕ್ರೋಸಾಫ್ಟ್ ಕೂಡ ಒಂದು. ಇನ್​​​ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದನ್ನು ಸ್ಪಷ್ಟಪಡಿಸಿದೆ.

    ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್
    ಮೈಕ್ರೋಸಾಫ್ಟ್ ಇಂಡಿಯಾ ಉದ್ಯೋಗಿಗಳು ತಮ್ಮ ಕೆಲಸದ ವಾತಾವರಣದ ಬಗ್ಗೆ ವಿಡಿಯೋ ಮಾಡಿದ್ದು, ಜನರಿಗೆ ತಿಳಿಸಿದ್ದಾರೆ. ವಿಡಿಯೋದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ತಮ್ಮ ಕಚೇರಿಯ ಲುಕ್ ತೋರಿಸುತ್ತಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂದು ಹೇಳುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಮೈಕ್ರೋಸಾಫ್ಟ್ ಖಾತೆಯಿಂದಲೂ ಕಾಮೆಂಟ್ ಮಾಡಲಾಗಿದೆ.

    ನೌಕರರಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?
    ವೈರಲ್ ವಿಡಿಯೋ ಮೈಕ್ರೋಸಾಫ್ಟ್ ಇಂಡಿಯಾದ ಹೈದರಾಬಾದ್ ಕಚೇರಿಯ ಗ್ಲಿಂಪ್ಸ್ ಅನ್ನು ತೋರಿಸುತ್ತದೆ. ಕಚೇರಿ ಆವರಣದ ಸೊಬಗು ವಿಡಿಯೋದಲ್ಲಿ ಗೋಚರಿಸುತ್ತಿದೆ. ಕಚೇರಿ ಆವರಣವು ಶಾಂತಿಯುತ ವಾತಾವರಣದಲ್ಲಿದೆ ಮತ್ತು ಹೇರಳವಾದ ಹಸಿರನ್ನು ಹೊಂದಿದೆ. ಮೈಕ್ರೋಸಾಫ್ಟ್‌ನಿಂದ ಉಚಿತ ತಿಂಡಿ, ಫಿಲ್ಟರ್ ಕಾಫಿ, ಸಾಕಷ್ಟು ಮೈಕ್ರೋಸಾಫ್ಟ್ ಟೀ ಶರ್ಟ್‌ಗಳು ಇತ್ಯಾದಿಗಳನ್ನು ಪಡೆಯುತ್ತೇವೆ ಎಂದು ಉದ್ಯೋಗಿಗಳು ಹೇಳುತ್ತಿದ್ದಾರೆ.

    ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಹೆಚ್ಚು ಇಷ್ಟಪಡುವ ವಿಷಯವೆಂದರೆ ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲು ಕಚೇರಿಯಲ್ಲಿಯೇ ನಿರ್ಮಿಸಲಾದ ಸುಂದರವಾದ ನಿದ್ರೆ ಕೊಠಡಿಗಳು. ಇಲ್ಲಿ ಉದ್ಯೋಗಿಗಳು ತಮ್ಮ ಆಯಾಸವನ್ನು ನಿವಾರಿಸಿಕೊಂಡು ವಿಶ್ರಾಂತಿ ಪಡೆಯುತ್ತಾರೆ. ಮೈಕ್ರೋಸಾಫ್ಟ್ ಉದ್ಯೋಗಿಗಳು ಕಂಪನಿಯಿಂದ ಇಡೀ ನಗರಕ್ಕೆ ಹವಾನಿಯಂತ್ರಿತ ಶಟಲ್ ಬಸ್ ಸೇವೆಯನ್ನು ಪಡೆಯುವುದಾಗಿ ಹೇಳುತ್ತಿದ್ದಾರೆ. ಅವರು ಎಲ್ಲಿಂದಲಾದರೂ ಕೆಲಸ ಮಾಡುವ ಅನುಕೂಲವನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ವರ್ಕ್-ಲೈಫ್ ಬ್ಯಾಲೆನ್ಸ್ ಮಾಡಲು ಕಂಪನಿಯು ಸಹಾಯವನ್ನು ಒದಗಿಸುತ್ತದೆ.

    54 ಎಕರೆಯಲ್ಲಿ ಕಚೇರಿ ನಿರ್ಮಾಣ
    ಮೈಕ್ರೋಸಾಫ್ಟ್ ಇತ್ತೀಚೆಗೆ ಆಪಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಲಿಸ್ಟೆಡ್ ಕಂಪನಿಯಾಗಿದೆ. ಪ್ರಸ್ತುತ, ಮೈಕ್ರೋಸಾಫ್ಟ್ $3 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರ್ಕೆಟ್ ಕ್ಯಾಪ್ ಹೊಂದಿರುವ ವಿಶ್ವದ ಏಕೈಕ ಕಂಪನಿಯಾಗಿದೆ. ಭಾರತದಲ್ಲಿನ ಹೈದರಾಬಾದ್‌ನಲ್ಲಿರುವ ಮೈಕ್ರೋಸಾಫ್ಟ್‌ನ ಕಚೇರಿಯನ್ನು 54 ಎಕರೆ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ. ಮೈಕ್ರೋಸಾಫ್ಟ್‌ನ ಹೈದರಾಬಾದ್ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್, 24-ಗಂಟೆಗಳ ಆಂಬ್ಯುಲೆನ್ಸ್, ಫಾರ್ಮಸಿ, ಪ್ರತಿ ಮಹಡಿಯಲ್ಲಿ ಸಭೆಯ ಪ್ರದೇಶ, ಹೊರಾಂಗಣ ಆಂಫಿಥಿಯೇಟರ್, ವ್ಯಾಯಾಮಕ್ಕಾಗಿ ಜಿಮ್‌ನಂತಹ ಸೌಲಭ್ಯಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts