More

    ಬಿಪಿಎಲ್‌ ಕಾರ್ಡ್​ ಅರ್ಜಿದಾರರಿಗೆ ಸಿಗಲಿದೆ ಉಚಿತ ರೇಷನ್

    ಬೆಂಗಳೂರು: ಕರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಿರುವ ಪರಿಣಾಮವಾಗಿ ಬಡವರು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ, ಹೊಸದಾಗಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಎರಡು ತಿಂಗಳು ಉಚಿತ ರೇಷನ್ ನೀಡಲಿದೆ. ಜೊತೆಗೆ ಎಪಿಎಲ್​ ಕಾರ್ಡ್​​ಗೆ ಅರ್ಜಿ ಸಲ್ಲಿಸಿದವರಿಗೆ ವಿನಾಯಿತಿ ದರದಲ್ಲಿ ಅಕ್ಕಿ ನೀಡಲಿದೆ.

    ಮೇ ಮತ್ತು ಜೂನ್ ತಿಂಗಳಲ್ಲಿ ಪ್ರತಿ ಬಿಪಿಎಲ್​ ಅರ್ಜಿ ಸಲ್ಲಿಸಿದವರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು. ಅದೇ ರೀತಿ ಎಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೆ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿ ಪಡೆಯಲು ಅವಕಾಶವಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಜಿದಾರರು ಬಯೋಮೆಟ್ರಿಕ್ ಅಥವಾ ಆಧಾರ್ ಓಟಿಪಿ ಮೂಲಕ ರೇಷನ್ ಪಡೆಯಬೇಕೆಂದು ಆಹಾರ ಇಲಾಖೆ ತಿಳಿಸಿದೆ.

    ರೇಷನ್ ಪಡೆಯುವುದು ಹೇಗೆ ? : ಹೊಸದಾಗಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ವೇಳೆ ನೀಡಿರುವ ರಸೀದಿಯಲ್ಲಿರುವ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತೋರಿಸಿ ರೇಷನ್ ಪಡೆಯಬಹುದು. ಒಂದು ವೇಳೆ ರೇಷನ್ ನೀಡಲು ನಿರಾಕರಿಸಿದರೆ ಅಂಥವರ ವಿರುದ್ಧ ದೂರು ನೀಡಲು ಅವಕಾಶವಿದೆ. ಪ್ರತಿಯೊಬ್ಬ ಪಡಿತರ ಚೀಟಿದಾರರಿಗೂ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಪಡಿತರ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಪಡಿತರ ದುರ್ಬಳಕೆ, ಅವ್ಯವಹಾರ ಅಥವಾ ಅಕ್ರಮ ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ: ಸ್ವಯಂಸೇವಕರೆಂದು ಶವ ಸುಡಲು ಹಣ ಪಡೆಯುತ್ತಿದ್ದ ಇಬ್ಬರ ಸೆರೆ

    ಕಾರ್ಡ್​ ಹೊಂದಿರುವವರಿಗೆ ವಿತರಣೆ : ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಎರಡು ತಿಂಗಳ ಕಾಲ ತಲಾ 5 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 1,16,46,749 ಬಿಪಿಎಲ್ ಕಾರ್ಡ್ ಹಾಗೂ 10,86,603 ಅಂತ್ಯೋದಯ ಕಾರ್ಡ್‌ದಾರರಿದ್ದು, ಕೇಂದ್ರದ ಪಾಲಿಂದ ಪ್ರತಿ ಸದಸ್ಯನಿಗೆ ಮೇ ಮತ್ತು ಜೂನ್‌ನಲ್ಲಿ ತಲಾ 5 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.

    ಜೊತೆಗೆ, ಅನ್ನಭಾಗ್ಯ ಯೋಜನೆಯಡಿ ಮೇನಿಂದ ಹೊಸ ವ್ಯವಸ್ಥೆಯಡಿ ರೇಷನ್ ವಿತರಣೆ ಮಾಡಲಾಗುತ್ತಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಬದಲು, 2 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ ಹಾಗೂ ಪ್ರತಿ ಕಾರ್ಡ್‌ಗೆ 2 ಕೆ.ಜಿ. ಗೋಧಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗೆ 20 ಕೆ.ಜಿ. ಅಕ್ಕಿ ಹಾಗೂ 15 ಕೆ.ಜಿ. ರಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

    ದೇಶದ ಮುಕ್ಕಾಲು ಭಾಗ ಕರೊನಾ ಕೇಸುಗಳು ಈ 10 ರಾಜ್ಯಗಳಲ್ಲಿವೆ !

    ‘ಲಸಿಕೆ ಹಾಕಿಸಿಕೊಳ್ಳಿ ಅಂತ ಸಂದೇಶ ಹಾಕ್ತೀರಿ… ಆದರೆ ಲಸಿಕೆ ಎಲ್ಲಿದೆ ?’ – ಹೈಕೋರ್ಟ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts