More

    ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಯುವತಿಗೂ ಮೈಸೂರು ವಿವಿಗೂ ಇರೋ ನಂಟೇನು?

    ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿತ್ತಿಪತ್ರ ಹಿಡಿದ ವಿದ್ಯಾರ್ಥಿನಿಯ ವಿವರ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.

    ಭಿತ್ತಿಪತ್ರ ಪ್ರದರ್ಶನ ಮಾಡಿದ ವಿದ್ಯಾರ್ಥಿನಿ ಹೆಸರು ನಳಿನಿ ಎಂದು ತಿಳಿದುಬಂದಿದೆ. ಈಕೆ ತಮಿಳುನಾಡು ಮೂಲದವಳಾಗಿದ್ದು ಮೂಲತಃ ಶ್ರೀಮಂತ ಕುಟುಂಬದವಳು ಎನ್ನಲಾಗಿದೆ. ಅಲ್ಲದೆ, ಕಾರ್ಯಕರ್ತೆಯಾಗಿದ್ದು, ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆಗೆ ಕರೆಯದೇ ಬಂದ ಅತಿಥಿ ಎಂದು ಹೇಳಲಾಗಿದೆ.

    ನಳಿನಿಗೆ ತಮಿಳುನಾಡು, ಕರ್ನಾಟಕ ಹಾಗೂ ಗುಜರಾತ್​ ನಂಟಿದೆ. ತಂದೆ ಬಾಲಕುಮಾರ್​ ಮೂಲತಃ ತಮಿಳುನಾಡು ನಿವಾಸಿ. ಶೈಕ್ಷಣಿಕ ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ನಳಿನಿ ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. 2016ನೇ ಸಾಲಿನಲ್ಲಿ ಪತ್ರಿಕೋದ್ಯಮ ಎಂ.ಎ. ವ್ಯಾಸಂಗ ಮಾಡಿದ್ದಾರೆ.

    ಗುಜರಾತ್​ ರಾಜ್ಯದ ಗಾಂಧಿನಗರದಲ್ಲೂ ಉನ್ನತ ಶಿಕ್ಷಣ ಪೂರೈಸಿದ್ದಾರೆ. ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಡಿಸೈನ್​ನಲ್ಲಿ ಫೋಟೋಗ್ರಫಿ ಡಿಸೈನ್​ ಕುರಿತು ಎಂ.ಡಿಇಎಸ್ ಮಾಡಿದ್ದು, ಮೈಸೂರಿಗೆ ವಾಪಸ್ಸಾದ ಬಳಿಕ ಹವ್ಯಾಸಿ ಛಾಯಾಗ್ರಾಹಕಿಯಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ನಳಿನಿ ಫೇಸ್​ಬುಕ್​ನಲ್ಲಿ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್​ ಷಾ ವಿರುದ್ಧ ಅವಹೇಳನಕಾರಿಯಾಗಿ ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts