More

    ಫ್ರೀ ಕಾಶ್ಮೀರ ಭಿತ್ತಿಫಲಕ ಪ್ರದರ್ಶನ ಪ್ರಕರಣ : ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

    ಮೈಸೂರು: ಫ್ರೀ ಕಾಶ್ಮೀರ ಭಿತ್ತಿ ಫಲಕ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಹಾಗೂ ಪ್ರತಿಭಟನೆ ಆಯೋಜನೆ ಮಾಡಿದ್ದ ವಿದ್ಯಾರ್ಥಿ ಸಂಘಟನೆಯ ಮರಿದೇವಯ್ಯ ಸೇರಿ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ನ್ಯಾಯಾಲಯ ಜ.27ಕ್ಕೆ ಕಾಯ್ದಿರಿಸಿದೆ.

    ನಳಿನಿ ಪರ ಹಿರಿಯ ವಕೀಲರಾದ ಎನ್.ಎಸ್. ದ್ವಾರಕನಾಥ್ ತಂಡದ ವಕೀಲರಾದ ಜಗದೀಶ್, ಅನಿಸ್​ಪಾಷ, ವಿಶ್ವನಾಥ್, ಮರಿದೇವಯ್ಯ ವಾದ ಮಂಡಿಸಿದರು.

    ಕಾಶ್ಮೀರದಲ್ಲಿಯೂ ಮೊಬೈಲ್, ಇಂಟರ್​ನೆಟ್ ಸೇರಿ ಜನರು ಸಹಜವಾಗಿ ಬದುಕಲು ಅವಕಾಶ ಮಾಡಿಕೊಡಬೇಕು, ಭಯೋತ್ಪಾದನೆ ಕೃತ್ಯವನ್ನು ತಡೆಗಟ್ಟುವ ಅರ್ಥದಲ್ಲಿ ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶಿಸಿದ್ದರು. ಹಾಗಾಗಿ ಇದು ರಾಷ್ಟ್ರವಿರೋಧಿ ಕೃತ್ಯವಲ್ಲ ಎಂದು ಸಮರ್ಥಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts