More

    ಸಿಸಿಬಿ ವಶಕ್ಕೆ ಪಡೆದಿರೋ ಮಹಾ ವಂಚಕ ಯುವರಾಜ್​ನ​ ಆಸ್ತಿಯ ಮೌಲ್ಯ ಕೇಳಿದ್ರೆ ದಂಗಾಗ್ತೀರಾ!

    ಬೆಂಗಳೂರು: ಮಹಾ ವಂಚಕ‌ ಯುವರಾಜ್ ಅಲಿಯಾಸ್​ ಸ್ವಾಮಿ ಬಂಧನ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು, ಯುವರಾಜ್​ಗೆ ಸಂಬಂಧಿಸಿದ ಆಸ್ತಿಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.

    ಯುವರಾಜ್​ ಅಕ್ರಮವಾಗಿ ಸಂಪಾದಿಸಿದ್ದ 18 ವಿವಿಧ ಪ್ರಾಪರ್ಟಿಗಳನ್ನು ಸಿಸಿಬಿ ಅಟ್ಯಾಚ್ ಮಾಡಿಕೊಂಡಿದೆ. ಸುಮಾರು 60 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಆಸ್ತಿಯ‌ ಮೌಲ್ಯಮಾಪನ ಸಂಪೂರ್ಣವಾಗಿ ಆಗಿಲ್ಲ. ಸದ್ಯಕ್ಕೆ 60ಕ್ಕೂ ಹೆಚ್ಚು ಕೋಟಿಯ ಸ್ಥಿರ ಮತ್ತು ಚರಾಸ್ಥಿಯು ಪ್ರಕರಣದಲ್ಲಿ ಅಟ್ಯಾಚ್ ಮಾಡಲಾಗಿದೆ.

    ಇದನ್ನೂ ಓದಿರಿ: ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ ಎಂದು ಪತ್ರ ಬರೆದ ನೆರೆಮನೆಯವರಿಗೆ ಮಹಿಳೆ ಕೊಟ್ಟ ಉತ್ತರ ವೈರಲ್​!​

    ಯುವರಾಜ್ ಆಸ್ತಿ ವಿವರಣೆಗೆ ಬರುವುದಾರೆ, ಬೆಂಗಳೂರಿನ ಐಷಾರಾಮಿ ಮನೆ, ಯುವರಾಜ್ ಹೆಸರಿನಲ್ಲಿರೋ ನಿವೇಶನಗಳು, ಪತ್ನಿ ಪ್ರೇಮ ಹೆಸರಿನಲ್ಲಿ ಮಂಡ್ಯದಲ್ಲಿರುವ ಜಮೀನು, ಐಷಾರಾಮಿ ಕಾರುಗಳು ( ಮರ್ಸಿಡೆಸ್ ಬೆಂಜ್, ರೇಂಜ್ ರೋವರ್ ಜಪ್ತಿ) ಸೇರಿದಂತೆ ಇನ್ನು ಬೇರೆ ಬೇರೆ ಆಸ್ತಿ-ಪಾಸ್ತಿಯನ್ನು ಅಟ್ಯಾಚ್ ಮಾಡಲಾಗಿದೆ.

    ಆಸ್ತಿಗಳ ಮಾಹಿತಿ ಮತ್ತು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಕೇಸ್ ಇತ್ಯರ್ಥ ಆಗುವವರೆಗೂ ಆಸ್ತಿ-ಪಾಸ್ತಿ ಮಾರುವ ಅಧಿಕಾರ ಯುವರಾಜ್​ಗೆ ಇರುವುದಿಲ್ಲ. ವಂಚನೆ ಹಣದಿಂದಲೇ ಆಸ್ತಿ ಖರೀದಿ ಮಾಡಿರೋದು ಪಕ್ಕ ಆದ್ರೆ ಸಂಪೂರ್ಣ ಆಸ್ತಿ ಜಪ್ತಿಯಾಗಲಿದೆ. ಜಪ್ತಿಯಾದ ಆಸ್ತಿಯನ್ನು ಕೋರ್ಟ್ ಮ‌ೂಲಕ ವಂಚನೆಗೆ ಒಳಗಾದವರಿಗೆ ನೀಡಲಾಗುತ್ತದೆ. (ದಿಗ್ವಿಜಯ ನ್ಯೂಸ್​)

    20 ರೂ. ನೀರಿನ ಬಾಟಲ್​ಗೆ 164 ರೂ. ಪಡೆದ ಹೋಟೆಲ್​: 5 ವರ್ಷದ ಹೋರಾಟಕ್ಕೆ ಗೆಲುವು, ಸಿಕ್ಕಿದ ಪರಿಹಾರವೆಷ್ಟು?

    ಭಾರತದಲ್ಲಿ ಇಂದು ಕೋವಿಡ್​ ಲಸಿಕೆ ಮೊದಲು ಪಡೆದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

    ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಡಿವೋರ್ಸ್​ ಬಿಟ್ಟು ಹೆಣ್ಣಿಗೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts