More

    ನಯವಂಚಕನ ಚಪ್ಪಲಿ, ಶೂ ಪ್ರೇಮ; ಈತನಲ್ಲಿದೆ ವೈವಿಧ್ಯಮಯ ಸಂಗ್ರಹ

    ನವದೆಹಲಿ: ಸಾಮಾನ್ಯವಾಗಿ ನರಿ ಎಂದ ಕೂಡಲೇ ನೆನಪಾಗುವುದು ಅದರ ವಂಚಕ ಬುದ್ಧಿಯ ಕತೆಗಳು. ಅದು ತನ್ನ ಶತ್ರುಗಳನ್ನು ಹೇಗೆಲ್ಲ ವಂಚಿಸಿ, ಅಪಾಯದಿಂದ ಪಾರಾಗುತ್ತಿತ್ತು ಎಂಬುದನ್ನು ಆ ಕತೆಗಳಿಂದ ನಾವು ತಿಳಿದುಕೊಂಡಿದ್ದೇವೆ. ಆದರೆ, ಇಲ್ಲೊಂದು ನರಿ, ಜನರನ್ನು ವಂಚಿಸಿ ಪ್ರಾಣ ರಕ್ಷಿಸಿಕೊಳ್ಳುವ ಬದಲು, ಅವರ ಪಾದರಕ್ಷೆಗಳನ್ನು ಕದ್ದು ಭಾರಿ ಸುದ್ದಿಯಾಗಿದೆ.

    ಈ ನಯವಂಚಕನಿಗೆ ಮನುಷ್ಯರ ಚಪ್ಪಲಿ ಮತ್ತು ಶೂ ಎಂದರೆ ಪಂಚಪ್ರಾಣ. ತನಗೆ ಅದನ್ನು ಹಾಕಿಕೊಂಡು ಫ್ಯಾಶನ್​ ಹೊಡೆಯಲು ಅವಕಾಶವಿಲ್ಲ ಎಂಬುದು ಅದಕ್ಕೆ ಗೊತ್ತಿದ್ದರೂ, ನೂರಕ್ಕೂ ಹೆಚ್ಚು ಶೂ, ಕ್ರಾಕ್ಸ್​, ಫ್ಲಿಪ್​-ಫ್ಲಾಪ್ಸ್​, ಟ್ರೈನರ್ಸ್​ ಸೇರಿ ವೈವಿಧ್ಯಮ ಶೂ, ಚಪ್ಪಲಿಗಳನ್ನು ಕದ್ದುಕೊಂಡು ಹೋಗಿ ಬಚ್ಚಿಟ್ಟುಕೊಂಡಿತ್ತು ಎನ್ನಲಾಗಿದೆ.

    ಜರ್ಮನಿಯ ಬರ್ಲಿನ್​ ಬಳಿಯ ಝಾಲೆಂಡ್ರಾಫ್​ ಎಂಬಲ್ಲಿ ನರಿಯ ಈ ಕೃತ್ಯ ಬಯಲಾಗಿದೆ. ಝಾಲೆಂಡ್ರಾಫ್​ ಸುತ್ತಮುತ್ತಲ ನಿವಾಸಿಗಳ ಚಪ್ಪಲಿಗಳು ಹಠಾತ್ತನೆ ಗಯಾಬ್​ ಆಗುತ್ತಿದ್ದವು. ಯಾರೋ ಕಳ್ಳರು ಉದ್ದೇಶಪೂರ್ವಕವಾಗಿಯೇ ಕದ್ದುಕೊಂಡು ಹೋಗುತ್ತಿದ್ದಾರೆ. ಆದರೆ ಅವರು ಯಾರು ಎಂಬುದು ತಿಳಿಯದೆ ಕಂಗಾಲಾಗಿದ್ದರು. ತಮ್ಮ ಪಾದರಕ್ಷೆಗಳನ್ನು ರಕ್ಷಿಸಿಕೊಳ್ಳಲು ಅವರು ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಆರಂಭಿಸಿದ್ದರು.

    ಇದನ್ನೂ ಓದಿ: ನಾಲ್ವರ ಮೇಲೆ ಐಷಾರಾಮಿ ಕಾರು ಹರಿಸಿದಳು, ಕೇಳಿದ್ದಕ್ಕೆ ನಾಯಿ ಕಾರಣ ಎಂದಳು

    ಅದೊಂದು ದಿನ ಕ್ರಿಶ್ಚಿಯನ್​ ಮೇಯರ್​ ಎಂಬುವರು ಹೊಸದಾಗಿ ಖರೀದಿಸಿದ್ದ ಶೂಗಳು ಬೆಳಗಾಗುವಷ್ಟರಲ್ಲಿ ಕಾಣೆಯಾಗಿದ್ದವು. ಫೇಸ್​ಬುಕ್​ ಪೋಸ್ಟ್​ನಲ್ಲಿ ಈ ವಿಷಯ ತಿಳಿಸಿ, ಕಳ್ಳನನ್ನು ಹಿಡಿಯಲು ಸಹಕರಿಸುವಂತೆ ಮನವಿ ಮಾಡಿದ್ದರು. ಆದರೆ, ಇವರ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದ ಹಲವರು ತಮ್ಮ ಚಪ್ಪಲಿ, ಶೂ ಸೇರಿ ಪಾದರಕ್ಷೆಗಳು ಹಠಾತ್ತನೆ ಕಾಣೆಯಾಗಿರುವುದಾಗಿ ಹೇಳಿಕೊಂಡು, ಕಳ್ಳನನ್ನು ಹಿಡಿಯಲು ಏನು ಉಪಾಯ ಮಾಡಬಹುದು ಎಂಬ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿದ್ದರು.

    ಹೀಗೆ, ಪಾದರಕ್ಷೆ ಕಳ್ಳನನ್ನು ಹಿಡಿಯಲು ಮೇಯರ್​ ಸೂಕ್ತ ಉಪಾಯಕ್ಕಾಗಿ ತಡಕಾಡುತ್ತಿರುವಾಗಲೇ ಯಾವುದೋ ಪ್ರಾಣಿ ಚಪ್ಪಲಿಯನ್ನು ಕಚ್ಚಿಕೊಂಡು ಪೊದೆಯೊಳಗೆ ಹೋಗುತ್ತಿದ್ದದ್ದನ್ನು ಕಂಡಿದ್ದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ಮರುದಿನದಿಂದ ಆ ಪ್ರಾಣಿ ಯಾವುದು, ಅದು ಎಲ್ಲಿ ಹೋಗುತ್ತದೆ ಎಂದು ಮೇಯರ್​ ಶೋಧಿಸಲಾರಂಭಿಸಿದ್ದರು.

    ಅದೊಂದು ದಿನ ನರಿಯೊಂದು ಬಾಯಲ್ಲಿ ಪಾದರಕ್ಷೆ ಕಚ್ಚಿಕೊಂಡು ಹೋಗುತ್ತಿರುವುದು ಮೇಯರ್​ ಗಮನಕ್ಕೆ ಬಂದಿತು. ತಕ್ಷಣವೇ ಅವರು ಅದನ್ನು ತುಂಬಾ ಎಚ್ಚರಿಕೆಯಿಂದ ಹಿಂಬಾಲಿಸಿದಾಗ ಅದು ಪೊದೆಯೊಂದರ ಒಳಗೆ ಹೋಗಿದ್ದು ಕಾಣಿಸಿತ್ತು. ಅದು ಪೊದೆಯಿಂದ ಹೊರಹೋಗುವವರೆಗೆ ಕಾದಿದ್ದ ಅವರು, ನಂತರ ಪೊದೆಯನ್ನು ಶೋಧಿಸಿದಾಗ ಅದರೊಳಗೆ ನೂರುಕ್ಕೂ ಹೆಚ್ಚು ಜೋಡಿ ಪಾದರಕ್ಷೆಗಳು ಪತ್ತೆಯಾಗಿದ್ದವು.

    ಇದನ್ನೂ ಓದಿ: ಅಸಹಜ ಲೈಂಗಿಕಕ್ರಿಯೆಗೆ ಒತ್ತಾಯಿಸಿದ ಪತಿ, ಗುಪ್ತಾಂಗ ಕೊಯ್ದು ಕೊಂದಳು ಸತಿ

    ಫೋಟೋ ಸಮೇತ ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಕೊನೆಗೂ ಪಾದರಕ್ಷೆ ಕಳ್ಳನನ್ನು ಹುಡುಕುವಲ್ಲಿ ಯಶಸ್ವಿಯಾದೆ. ಆದರೆ, ಆತನ ಸಂಗ್ರಹದಲ್ಲಿ ನನ್ನ ಹೊಸ ಶೂಗಳು ಮಾತ್ರ ಕಾಣಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರರೊಬ್ಬರು, ಬಹುಶಃ ಅದು ಹೆಣ್ಣು ನರಿಯಾಗಿರಬಹುದು. ತನ್ನ ಮರಿಗಳನ್ನು ಕಳೆದುಕೊಂಡು ಅದು ಕೊರಗುತ್ತಿರಬಹುದು. ಆ ನಷ್ಟವನ್ನು ಭರಿಸಿಕೊಳ್ಳಲು ಅದು ಈ ಕೃತ್ಯ ಎಸಗುತ್ತಿರಬಹುದು ಎಂದು ಹೇಳಿದ್ದಾರೆ.

    ಇದಕ್ಕೆ ಉದಾಹರಣೆಯನ್ನೂ ನೀಡಿರುವ ಅವರು, ನಾವು ರೆಸ್ಕ್ಯೂ ಟೆರಿಯರ್​ ನಾಯಿಯನ್ನು ಸಾಕಿದ್ದೆವು. ಅದರ ಮರಿಗಳು ಕಳೆದು ಹೋಗಿದ್ದವು. ಅಂದಿನಿಂದ ಅದು ಮನೆಗಳ ಒಳಗೆ ನುಗ್ಗಿ ಕನ್ನಡಕದ ಡಬ್ಬಗಳನ್ನು ಮಾತ್ರ ಕೊಂಡೊಯ್ದು ಇಟ್ಟುಕೊಳ್ಳುತ್ತಿತ್ತು. ಸಾಮಾನ್ಯವಾಗಿ ಪ್ರಾಣಿಗಳು ತಮಗೇನಾದರೂ ನಷ್ಟವಾದರೆ, ಅದನ್ನು ಭರಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದು ಪಶುವೈದ್ಯರು ತಿಳಿಸಿದ್ದರು ಎಂದು ವಿವರಿಸಿದ್ದಾರೆ.

    ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ಸರ್ಕಾರದ ನಿಯಂತ್ರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts