More

    ನಲವತ್ತು ರೂಪಾಯಿ ಸಾರಾಯಿ ಏಳು ಮಕ್ಕಳ ಪ್ರಾಣ ಪಡೆದಿತ್ತು..!

    ವೈಶಾಲಿ: ರಸ್ತೆ ಪಕ್ಕದ ಮೈದಾನದಲ್ಲಿ ಮಲಗಿದ್ದವರು ಚಾಲಕನ ಅಚಾತುರ್ಯದಿಂದ ಪ್ರಾಣ ಬಿಟ್ಟ ಘಟನೆ ನಿನ್ನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಯಾದವ್​ ದುಃಖವನ್ನು ವ್ಯಕ್ತಪಡಿಸಿದ್ದರು. ಇಂದು ಆ ಟ್ರಕ್​ ಚಲಾಯಿಸುತ್ತಿದ್ದ ಚಾಲಕ ಹೇಳಿಕೆ ನೀಡಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ!

    ನಿನ್ನೆ ಪ್ರಧಾನಿ ಮೋದಿ ಅಪಘಾತದಲ್ಲಿ ಗಾಯಗೊಂಡ ಪ್ರತಿಯೊಬ್ಬರಿಗೂ 50,000 ರೂ. ಮತ್ತು ಮೃತಪಟ್ಟವರ ಓರ್ವ ಸಂಬಂಧಿಗೆ 2 ಲಕ್ಷ ರೂ. ಹಣವನ್ನು ಪ್ರಧಾನಮಂತ್ರಿ ನ್ಯಾಷನಲ್​ ರಿಲೀಫ್​ ಫಂಡ್​ನಿಂದ ನೀಡಿದ್ದಾರೆ. ಅದೇ ಬಿಹಾರದ ಸಿಎಂ ನಿತೀಶ್ ಕುಮಾರ್​ ಯಾದವ್​ ಕೂಡ ಗಾಯಗೊಂಡವರ ಚಿಕಿತ್ಸೆಯ ಖರ್ಚು ಮತ್ತು ಮೃತಪಟ್ಟವರಿಗೆ ಪರಿಹಾರ ಧನವನ್ನು ಘೋಷಿಸಿದ್ದಾರೆ.

    ವಿಶೇಷ ಸುದ್ದಿ ಏನಪ್ಪಾ ಎಂದರೆ ಇಂದು ಆ ಟ್ರಕ್​ ಚಲಾಯಿಸುತ್ತಿದ್ದ ಚಾಲಕ ಹೇಳಿಕೆ ನೀಡಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಟ್ರಕ್​ ಚಾಲಕ ಏನು ಹೇಳಿರಬಹುದು ಎಂದು ಊಹಿಸುತ್ತೀರಾ? ಟ್ರಕ್​ ಚಾಲಕ ಲಾಲು ಕುಮಾರ್​ 40 ರೂ. ಬೆಲೆಯ ದೇಸಿ ಮದ್ಯ ಸೇವಿಸಿ ಟ್ರಕ್​ ಚಲಾಯಿಸಿದ್ದನಂತೆ! ಈತ ಮತ್ತೊಂದು ಟ್ರಕ್​ಅನ್ನು ಓವರ್​ ಟೇಕ್​ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

    ಲಾಲೂ ಕಮಾರ್​ನ ರಕ್ತ ಪರೀಕ್ಷೆ ಮತ್ತು ಬ್ರೆಥ್ ಅನಲೈಝರ್ ಪರೀಕ್ಷೆ ಮೂಲಕ ಆತ ಮದ್ಯ ಸೇವಿಸುತ್ತಿದ್ದ ಎನ್ನುವ ವಿಷಯ ಧೃಢಪಟ್ಟಿದೆ ಎಂದು ವೈಶಾಲಿ ಜಿಲ್ಲೆಯ ಎಸ್​ಪಿ ಮನಿಶ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    https://www.vijayavani.net/sugarcane-prducers-stop-their-protest-as-cm-promised-right-value-to-farmers/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts