More

    ಯುವಕನ ಕೊಲೆ ಮಾಡಿದ್ದ ನಾಲ್ವರಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ಅಣ್ಣಾನಗರದಲ್ಲಿ ಹಳೇ ದ್ವೇಷದಿಂದ ಯುವಕನ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ನಾಲ್ವರಿಗೆ ಶಿವಮೊಗ್ಗದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

    ಇಲಿಯಾಜ್‌ನಗರದ ಅರ್ಬಾಜ್(19), ಮಿಳ್ಳಘಟ್ಟದ ಶಾರೂಕ್ ಖಾನ್(19), ಶಾದಾಬ್ (19), ಟ್ಯಾಂಕ್ ಮೊಹಲ್ಲಾದ ಅಲ್ಯಾಜ್ ಆಶು(19) ಜೀವಾವಧಿ ಶಿಕ್ಷೆಗೆ ಒಳಗಾದವರು. ಇವರು 2017ರ ಫೆ.8ರಂದು ಅಣ್ಣಾನಗರದ ಮಾತೃಶ್ರೀ ಸ್ಟುಡಿಯೋ ಹತ್ತಿರ ಹಾಡುಹಗಲೇ ಅಯಾತ್ ಅಲಿಯಾಸ್ ಬಚ್ಚಾ (19) ಎಂಬಾತನನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು.
    ಹಳೇ ದ್ವೇಷದ ಹಿನ್ನೆಲೆಯಲ್ಲಿ ಬರ್ಬರ ಕೊಲೆ ನಡೆದಿತ್ತು. ಈ ಬಗ್ಗೆ ಅಯಾತ್ ತಾಯಿ ನಾಜಿಮಾ ಅವರು ದೊಡ್ಡಪೇಟೆ ಠಾಣೆಗೆ ೀಲಿ ಇಮ್ರಾನ್, ಮೋಟು ಕುರ‌್ರಂ, ಇರ್ಫಾನ್, ಅಡ್ಡು, ಅಸಾದುಲ್ಲಾ, ಶಾರೂ, ಅರ್ಬಾಜ್, ಶಾದಾಬ್, ಅಶು ಸೇರಿ 12 ಮಂದಿ ವಿರುದ್ಧ ದೂರು ನೀಡಿದ್ದರು.
    ದೊಡ್ಡಪೇಟೆ ವೃತ್ತ ನಿರೀಕ್ಷಕರಾಗಿದ್ದ ಕೆ.ಟಿ.ಗುರುರಾಜ್ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಯಾಗಿದ್ದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೊಡ್ಡಪೇಟೆ ಠಾಣೆ ಮುಖ್ಯಪೇದೆ ಸುರೇಶ್ ಮತ್ತು ತುಂಗಾನಗರ ಠಾಣೆ ಮುಕ್ಯ ಪೇದೆ ಉಮೇಶ ಅವರು ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು.
    ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ಅವರು ಆರೋಪ ಸಾಬೀತಾಗಿದ್ದರಿಂದ ನಾಲ್ವರಿಗೆ ಬುಧವಾರ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದು ಉಳಿದ ಆರೋಪಿಗಳ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts