ಅಪಘಾತದಲ್ಲಿ ನಾಲ್ವರ ಸಾವು

blank
blank

ಕೆರೂರ: ಕುಡಿದ ಮತ್ತಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಾಷ್ಟ್ರೀಯ ಹೆದ್ದಾರಿ ಬದಿಯ ಫುಟ್‌ಪಾತ್ ಮೇಲೇರಿ ಪಾನ್‌ಶಾಪ್‌ಗೆ ಗುದ್ದಿದ್ದರಿಂದ ನಾಲ್ವರು ಮೃತಪಟ್ಟಿದ್ದಾರೆ. ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಮಂಗಳವಾರ ತೆರಳುತ್ತಿದ್ದ ಲಾರಿಯನ್ನು ಚಾಲಕ ಅನಿಲಕುಮಾರ ಕಾಟಾಪುರ ಮದ್ಯ ಸೇವಿಸಿ ಅತಿ ವೇಗದಲ್ಲಿ ಓಡಿಸುತ್ತಿದ್ದ. ಪಟ್ಟಣದ ಹೆಸ್ಕಾಂ ಕಚೇರಿ ಬಳಿ ಆತನಿಂದ ನಿಯಂತ್ರಣ ತಪ್ಪಿದ ಲಾರಿ ಪಾನ್‌ಶಾಪ್‌ಗೆ ಗುದ್ದಿದೆ. ಪಟ್ಟಣದ ಲಕ್ಷ್ಮಣಸಾ ಹಾದಿಮನಿ (28), ವ್ಯಾಪಾರಕ್ಕೆ ಬಂದ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಹಾನಂದ ಕರಿ (17), ಹುಬ್ಬಳ್ಳಿಯ ಪೂಜಾ ಹಳಪೇಟೆ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಜವಳಿ (20) ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಕಗಲಗೊಂಬ ಗ್ರಾಮದ ಪ್ರಜ್ವಲ ಕೋಟಿ ಎಂಬ 13 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಒಂದು ಆಕಳು ಮೃತಪಟ್ಟಿದ್ದು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.

ಬಾಗಲಕೋಟೆ ಮೂಲದ ಪರಶುರಾಮ ಕದಾಂಪುರ ಅವರಿಗೆ ಸೇರಿದ ಲಾರಿ ಇದಾಗಿದೆ. ಘಟನಾ ಸ್ಥಳಕ್ಕೆ ಬಾದಾಮಿ ಸಿಪಿಐ ರಮೇಶ ಹಾನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೂರ ಠಾಣೆ ಪಿಎಸ್‌ಐ ಸಂಜಯ ತಿಪರಡ್ಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮಟ್ಟಿತು. ಸಂಬಂಧಿಕರ ಗೋಳಾಟ ಕಂಡು ಸಾರ್ವಜನಿಕರು ಮಮ್ಮಲ ಮರುಗಿದರು.

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…