More

    ಹೊಸಬುಳ್ಳಾಪುರದಲ್ಲಿ 1264 ಮನೆ ನಿರ್ಮಾಣಕ್ಕೆ ಶಂಕು

    ಭದ್ರಾವತಿ: ನಗರದಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮೊದಲ ಹಂತವಾಗಿ 2,048 ಗುಂಪು ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಹೊಸಬುಳ್ಳಾಪುರ ಸ.ನಂ.55ರಲ್ಲಿ 16 ಎಕರೆಯಲ್ಲಿ 1,264 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ತಿಮ್ಲಾಪುರ ಗ್ರಾಮದಲ್ಲಿ ಉಳಿದ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಪೌರಾಯುಕ್ರ ಪ್ರಕಾಶ್ ಎಂ.ಚನ್ನಣ್ಣನವರ್ ತಿಳಿಸಿದರು.
    ಕೇಂದ್ರ ಸರ್ಕಾರದ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ನಗರಸಭೆಯಿಂದ ಜಿ.ಪ್ಲಸ್ ತ್ರಿ ಗುಂಪು ಮನೆಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
    ಗುತ್ತಿಗೆದಾರರರು ನಿಗದಿತ ಅವಧಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ಪೂರ್ಣಗೊಳಿಸಿ, ಅರ್ಹರಿಗೆ ಹಸ್ತಾಂತರಿಸಬೇಕು. ನಗರಸಭೆಯ ಎಲ್ಲ ಅಧಿಕಾರಿಗಳು, ಸದಸ್ಯರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.
    ನಗರಸಭೆ ಸದಸ್ಯ ಚನ್ನಪ್ಪ ಮಾತನಾಡಿ, ನಗರದಲ್ಲಿನ ನಿವೇಶನ ರಹಿತರಿಗೆ ವಸತಿ ನೀಡುವ ಉದ್ದೇಶದಿಂದ ಸರ್ಕಾರದಿಂದ ಅನುದಾನ ಪಡೆಯುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. 205 ಕೋಟಿ ರೂ. ಅನುದಾನವೂ ಲಭ್ಯವಾಗಿದೆ. ಗುತ್ತಿಗೆ ಪಡೆದ ಗುತ್ತಿಗೆದಾರರು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕೊಡಬೇಕು ಎಂದು ಮನವಿ ಮಾಡಿದರು.
    ಗುತ್ತಿಗೆದಾರ ರಂಗೇಗೌಡ ಮಾತನಾಡಿ, ಗುಂಪು ಮನೆಗಳ ನಿರ್ಮಾಣ ಕಾಮಗಾರಿ ಗುತ್ತಿಗೆಯು ಆಂಧ್ರಪ್ರದೇಶ ಮೂಲದ ನಾಗಾರ್ಜುನ ಕಂಪನಿ ಲಿ.ಗೆ ದೊರೆತಿದ್ದು ಗುಣಮಟ್ಟದ ಕಾಮಗಾರಿ ನಡೆಸಲಾಗುವುದು. ಮನೆಗಳ ನಿರ್ಮಾಣದ ಜತೆಗೆ ರಸ್ತೆ, ಚರಂಡಿ, ಪಾರ್ಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸೇರಿ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 26 ಬ್ಲಾಕ್‌ನಲ್ಲಿ 1264 ಮನೆಗಳ ನಿರ್ಮಾಣ ಮಾಡಲಾಗುವುದು 2 ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
    ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಕದಿರೇಶ್, ಎಸ್.ಕುಮಾರ್, ಉದಯಕುಮಾರ್, ಪಲ್ಲವಿ, ನಾಗರತ್ನಾ, ಕೋಟೇಶ್ವರರಾವ್, ಮಣಿ, ಶಾಸಕ ಸಂಗಮೇಶ್ವರ್ ಪುತ್ರ ಗಣೇಶ್, ಇಂಜಿನಿಯರ್ ಸ್ವಾಮಿ, ಶಿವಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts