More

    ‘ಫಾರ್ ರಿಜಿಸ್ಟ್ರೇಷನ್’ ಇದು ಸಂಬಂಧಗಳ ನೋಂದಣಿ; ಅಂಬಾ ಭವಾನಿ ಸನ್ನಿಧಿಯಲ್ಲಿ ನೆರವೇರಿದ ಮುಹೂರ್ತ

    ಬೆಂಗಳೂರು: ಬಾಲ್ಯದ ಸ್ನೇಹಿತರೇ ಒಂದಾಗಿ ಇದೀಗ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಈಗಾಗಲೇ ನೋದಂಣಿಯನ್ನೂ ಮಾಡಿಸಿದ್ದಾರೆ. ಅಂದರೆ ಚಿತ್ರದ ಹೆಸರೇ ಫಾರ್ ರಿಜಿಸ್ಟ್ರೇಷನ್ ಎಂದು ಹೆಸರಿಟ್ಟಿದ್ದಾರೆ. ಶುಭ ಶುಕ್ರವಾರದಂದು ವಸಂತನಗರದಲ್ಲಿನ ಅಂಬಾಭವಾನಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡಿದೆ. ನಟ ನಿಖಿಲ್ ಕುಮಾರಸ್ವಾಮಿ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ಮಾಪಕ ನವೀನ್ ಕುಮಾರ್ ಅವರ ಪುತ್ರ ನಿಶ್ಚಲ್ ಕ್ಯಾಮರಾ ಸ್ವೀಚ್ ಆನ್ ಮಾಡಿದರು.

    ಇದನ್ನೂ ಓದಿ: ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ; ಕೊನೆಗೂ ತಪ್ಪಾಯ್ತೆಂದು ಮಂಡಿಯೂರಿದ ವಿಜಯ್ ರಂಗರಾಜು

    ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎನ್. ನವೀನ್ ರಾವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ಮಿಲನಾ ನಾಗರಾಜ್ ನಟಿಸಲಿದ್ದು, ಇನ್ನೇನು ಶೀಘ್ರದಲ್ಲಿ ಚಿತ್ರದ ಚಿತ್ರೀಕರಣವನ್ನೂ ಶುರು ಮಾಡಲಿದ್ದಾರೆ. ಚಿತ್ರದ ಬಗ್ಗೆ ಮೊದಲಿಗೆ ಮಾಹಿತಿ ನೀಡಿದ ನಿರ್ದೇಶಕ ನವೀನ್ ದ್ವಾರಕಾನಾಥ್, ಕಳೆದ ಹಲವು ವರ್ಷಗಳಿಂದ ಡ್ಯಾಕ್ಯುಮೆಂಟರಿಗಳನ್ನು ಮಾಡುತ್ತ ಬಂದಿದ್ದೆ. ನಾಟಕ, ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದೆ. ಅದರಲ್ಲೂ ಈ ಚಿತ್ರದ ನಿರ್ಮಾಪಕ ನವೀನ್ ರಾವ್ ನನ್ನ ಬಾಲ್ಹ ಸ್ನೇಹಿತ. ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅದೇ ರೀತಿ ಇದೀಗ ಈ ಸಿನಿಮಾ ಸೆಟ್ಟೇರಿದೆ. ಒಟ್ಟು 30 ದಿನಗಳ ಶೂಟಿಂಗ್ ಯೋಜನೆ ಇದ್ದು, ಸಕಲೇಶಪುರ, ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಳ್ಳುವ ಪ್ಲಾನ್ ನಿರ್ದೇಶಕರದ್ದು.

    ಇದನ್ನೂ ಓದಿ: ಫುಲ್​ಟೈಟ್​ ಆಗಿ ನಟನಿಂದ ನಡೀತು ಫೈಟ್​! ಹುಟ್ಟುಹಬ್ಬ ಆಚರಣೆಯನ್ನು ಪೋಸ್ಟ್​ ಮಾಡಿ ‘ಸಿಕ್ಕಬಿದ್ದ’

    ಇನ್ನು ಚಿತ್ರದ ನಾಯಕ, ಪೃಥ್ವಿ ಅಂಬರ್ ಸಹ ಚಿತ್ರದ ಎಳೆಯನ್ನು ಬಿಚ್ಚಿಟ್ಟರು, ಇಲ್ಲಿ ಸಂಬಂಧಗಳ ಸುತ್ತ ಸಿನಿಮಾ ಮಾಡಲಾಗುತ್ತಿದೆ. ರಿಜಿಸ್ಟರ್ ಆಗದ ಸಂಬಂಧಗಳು ಹೇಗಿರುತ್ತವೆ, ಅವನ್ನು ಒಂದು ಮಾಡುವುದು ಹೇಗೆ ಎಂಬಿತ್ಯಾದಿ ಅಂಶಗಳು ಸಿನಿಮಾದಲ್ಲಿರಲಿದೆ. ತುಳು ಸಿನಿಮಾ ನೋಡಿ ಭೇಟಿ ಮಾಡಿ ಒಂದೆಳೆ ಹೇಳಿದ್ದರು ಎಂದರು ಪೃಥ್ವಿ. ಅದೇ ರೀತಿ ನಾಯಕಿಯಾಗಿ ನಟಿಸಲಿರುವ ಮಿಲನಾ ಮಾತನಾಡಿ, ಶೀರ್ಷಿಕೆ ಕೇಳಿಯೇ ಸಿನಿಮಾ ಇಷ್ಟವಾಯ್ತು. ಸದ್ಯದ ಜನರೇಷನ್ಗೆ ಕಥೆ ಹೊಂದಿಕೆ ಆಗುತ್ತದೆ. ಇಡೀ ತಂಡವೂ ಒಂದು ರೀತಿ ಕಾರ್ಪೋರೇಟ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಚಿತ್ರದ ಭಾಗವಾಗುವುದಕ್ಕೆ ಖುಷಿ ಇದೆ ಎಂದರು.

    ‘ಫಾರ್ ರಿಜಿಸ್ಟ್ರೇಷನ್’ ಇದು ಸಂಬಂಧಗಳ ನೋಂದಣಿ; ಅಂಬಾ ಭವಾನಿ ಸನ್ನಿಧಿಯಲ್ಲಿ ನೆರವೇರಿದ ಮುಹೂರ್ತ ‘ಫಾರ್ ರಿಜಿಸ್ಟ್ರೇಷನ್’ ಇದು ಸಂಬಂಧಗಳ ನೋಂದಣಿ; ಅಂಬಾ ಭವಾನಿ ಸನ್ನಿಧಿಯಲ್ಲಿ ನೆರವೇರಿದ ಮುಹೂರ್ತ

    ಸಂಭಾಷಣೆ ಬರೆಯುವುದರ ಜತೆಗೆ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಮಾಡುತ್ತಿರುವ ತಬಲಾ ನಾಣಿ ಸಹ ಚಿತ್ರದ ಬಗ್ಗೆ ಮತ್ತು ತಂಡದ ಬಗ್ಗೆ ಮಾತನಾಡಿದರು. ಇನ್ನುಳಿದಂತೆ ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ರಾಘು ರಾಮನಕೊಪ್ಪ ಸೇರಿ ಹಲವು ಖ್ಯಾತ ನಾಮ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ವಿಶೇಷತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು. ಚಿತ್ರಕ್ಕೆ ವಿವೇಕ್ ಛಾಯಾಗ್ರಹಣ, ಹರೀಶ್ ಸಂಗೀತ ನೀಡಲಿದ್ದಾರೆ. ಚೇತನ್ ಕುಮಾರ್, ಕವಿರಾಜ್ ನಾಗಾರ್ಜುನ್ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಇರ್ಮಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.

    ರಾಘಣ್ಣ ‘ರಾಜತಂತ್ರ’ ಬಿಡುಗಡೆಗೆ ಸಿದ್ಧ; ಸೆನ್ಸಾರ್​ನಿಂದಲೂ ಸಿಕ್ತು ಪ್ರಮಾಣ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts