More

    ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಯೋಗ

    ಚಿತ್ರದುರ್ಗ: ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಅವರು ರೈತರಿಗೆ ದಸರಾ ಗಿಫ್ಟ್ ಘೋಷಿಸಿದ್ದಾರೆ. ಕಡಿಮೆ ನೀರಿನಲ್ಲಿ ಉತ್ತಮ ಕೃಷಿ ತಂತ್ರಗಾರಿಕೆ ಅರಿಯಲು ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಒಂದು ವಾರ ಅವಧಿಯ‘ಸುವರ್ಣ ರೈತ,ದುರ್ಗ ಟು ಇಸ್ರೇಲ್’ಹೆಸರಿನಡಿ ಪ್ರವಾಸ ಕಾರ‌್ಯಕ್ರಮ ರೂಪಿಸಿದ್ದಾರೆ.

    ಈ ವಿಷಯವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ರಘುಆಚಾರ್,ಜಿಲ್ಲೆಯಲ್ಲಿರುವ 4.42 ಲಕ್ಷ ಹೆಕ್ಟೆರ್ ಕೃಷಿ ಭೂಮಿಯ ಲ್ಲಿ 1. 16 ಲಕ್ಷ ಹೆಕ್ಟೆರ್‌ಗೆ ನೀರಾವರಿ ಸೌಲಭ್ಯವಿದೆ. ಈ ಹಿನ್ನೆಲೆಯಲ್ಲಿ ಇರುವಂಥ ಶೇ.20 ಕೃಷಿ ಭೂಮಿಯಲ್ಲೇ ಹೇರಳ ಕೃಷಿ ಉತ್ಪನ್ನಗಳ ರಫ್ತಿಗೆ ಹೆಸರಾಗಿರುವ ಇಸ್ರೇಲ್‌ಗೆ ಮಹಿಳೆಯರನ್ನೂ ಒಳಗೊಂಡಂತೆ 40 ವರ್ಷದೊಳಗಿನ ರೈತರನ್ನು ಕರೆದೊಯ್ಯಲಾಗುವುದು.

    ತಮ್ಮ ನೇತೃತ್ವದ ಈ ಪ್ರವಾಸಕ್ಕೆ ರೈತರನ್ನು ಆಯ್ಕೆ ಮಾಡಲು 2 ದಿನದೊಳಗೆ 7 ಜನರಿರುವ ಸಮಿತಿ ರಚಿಸಲಾಗುವುದು. ಈ ಕಾರ‌್ಯಕ್ರಮ ಪಕ್ಷಾತೀತವಾಗಿದೆ. ಎಲ್ಲ ಪಕ್ಷಗಳ ಕಿಸಾನ್ ವಿಭಾಗದವರೂ ಭಾಗವಹಿಸ ಬಹುದು. ಪ್ರವಾಸದ ವೇಳೆ ಟೆಲ್‌ಆವಿವ್ ಯೂನಿವರ್ಸಿಟಿಯ ಡಾ.ರಾಮ್‌ಫಿಶ್‌ಮ್ಯಾನ್ ನಮ್ಮ ರೈತರಿಗೆ ನೆರವಾಗಲಿದ್ದಾರೆ.

    ಪ್ರವಾಸದಿಂದ ಮರಳಿದ ಬಳಿಕ ಅಲ್ಲಿಯ ಕೆಲವು ತಜ್ಞರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವ ಕಾರ‌್ಯಾಗಾರವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗುವುದು. ಈಗಾಗಲೇ ಚಿತ್ರದುರ್ಗ ತಾಲೂಕಿನಲ್ಲಿ ಆರೂವರೆ ಸಾವಿರ ಹೆಕ್ಟೇರ್‌ನಲ್ಲಿ ಉಚಿತವಾಗಿ ಟ್ರಾೃಕ್ಟರ್ ಬಿತ್ತನೆಗಾಗಿ ರೈತರಿಗೆ ನೆರವಾಗಿದ್ದೇನೆ. ಜಿಲ್ಲೆಯ ಎಲ್ಲ ತಾಲೂಕುಗಳ ರೈತರ ಸಮಸ್ಯೆಗಳನ್ನು ಆಲಿಸಲು ಪ್ರವಾಸ ನಡೆಸಿದ್ದೇನೆ. ಪ್ರವಾಸ ಕಾರ‌್ಯಕ್ರಮದ ಲೋಗೋ ಬಿಡುಗಡೆ ಮಾಡಲಾಯಿತು. ಎ.ಫ್ರಿನ್ಸ್,ಸುನೀಲ್ ಇದ್ದರು.

    25ರೊಳಗೆ ಪಟ್ಟಿ ಸಿದ್ಧ
    ಅ.25ರೊಳಗೆ ಪ್ರವಾಸಕ್ಕೆ ತೆರಳುವ ರೈತರ ಪಟ್ಟಿ ಹಾಗೂ ನವೆಂಬರ್ 10ರೊಳಗೆ ಪಾಸ್‌ಪೋರ್ಟ್,ವೀಸಾ ಸಿದ್ಧವಾಗಲಿದೆ. 10 ರಿಂದ 15 ರವರೆಗೆ ಆಯ್ಕೆಯಾದ ರೈತರಿಗೆ ತರಬೇತಿ,ಸಂವಾದ ಕಾರ‌್ಯಕ್ರಮದ ಬಳಿಕ 20ರಂದು ಇಸ್ರೇಲ್‌ಗೆ ತೆರಳುವುದಾಗಿ ಹೇಳಿದರು. ಆಸಕ್ತ ರು 8861161005/9880289261,[email protected] ನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts