More

    ಚೀನಾ ಕಮ್ಯುನಿಸ್ಟರ ವಿರುದ್ಧ ಸಿಡಿದೆದ್ದ ರಾಜಕೀಯ ಕೈದಿ- ಹೀಗೊಂದು ಪ್ರಯೋಗ

    ಟಿಬೆಟ್‌: ಇಡೀ ವಿಶ್ವಕ್ಕೇ ಮಾರಕವಾಗಿರುವ ಚೀನಾ, ಟಿಬೆಟಿಯನ್ನರ ಮೇಲೆ ಚೀನಾ ಕಮ್ಯುನಿಸ್ಟರು ಮಾಡಿರುವ ಅನಾಚರಗಳು ಒಂದಲ್ಲ, ಎರಡಲ್ಲ…

    ಇದೀಗ ಇವರ ವಿರುದ್ಧ ಸಿಡಿದಿದ್ದಿರುವ ಮಾಜಿ ರಾಜಕೀಯ ಕೈದಿಯೊಬ್ಬರು ಇವರ ದಬ್ಬಾಳಿಕೆಯ ವಿರುದ್ಧ ಜಾಗೃತಿ ಮೂಡಿಸಲು ಬೈಸಿಕಲ್‌ನಲ್ಲಿ 800 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ. ಇಡೀ ವಿಶ್ವಕ್ಕೆ ಚೀನಾ ಕಮ್ಯುನಿಸ್ಟರ ಕುತಂತ್ರ ಬುದ್ಧಿ, ಅವರ ದಬ್ಬಾಳಿಕೆ ಕುರಿತು ಅರಿವು ಮೂಡಿಸುವ ಉದ್ದೇಶ ಇವರದ್ದು.

    40 ವರ್ಷದ ಲೋಬ್ಸಾಂಗ್ ಜಿನ್ಪಾ, ಸದ್ಯ ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದರೆ ಟಿಬೆಟಿಗರ ಮೇಲೆ ನಡೆಯುತ್ತಿರುವ ಚೀನಾ ಕಮ್ಯುನಿಸ್ಟರ ಅನಾಚಾರಗಳ ಕುರಿತು ತೀವ್ರವಾಗಿ ನೊಂದಿರುವ ಅವರು, ತಾವು ಇರುವ ಸ್ಥಳದಿಂದಲೇ ಸೈಕಲ್‌ ಸವಾರಿ ಆರಂಭಿಸಿದ್ದಾರೆ.

    “ಬೈಕ್ ರೈಡ್ ಫಾರ್ ಟಿಬೆಟ್” ಹೆಸರಿನಲ್ಲಿ ಈ ಸವಾರಿ ಆರಂಭಿಸಿದ್ದಾರೆ. ನ್ಯೂಯಾರ್ಕ್ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳ ಮೂಲಕ ಅಮೆರಿಕದ ಶ್ವೇತಭವನದ ಹೊರಗೂ ಘೋಷಣೆಗಳನ್ನು ಕೂಗುವ ಮೂಲಕ ಎರಡು ವಾರಗಳಿಂದ ಸೈಕಲ್‌ ಯಾತ್ರೆ ನಡೆಸುತ್ತಿದ್ದಾರೆ. ಇಡೀ ವಿಶ್ವಕ್ಕೆ ಚೀನಾದ ಕಮ್ಯುನಿಸ್ಟರ ದೌರ್ಜನ್ಯ, ದಬ್ಬಾಳಿಕೆ ಕುರಿತು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. “ಚೀನಾದ ಆಡಳಿತವು ಕಾನೂನುಬಾಹಿರ ಆಡಳಿತವಾಗಿದೆ ಮತ್ತು ಚೀನಿಯರು ಜಗತ್ತಿಗೆ ಅಪಾಯಕಾರಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಇಂದಿರಾ ಟು ಸೋನಿಯಾ: ತನಿಖಾ ಸಮಿತಿಯಿಂದ ಭ್ರಷ್ಟ ಮುಖ ಬಯಲು!

    “ಚೀನಾ ಪ್ರಪಂಚದಾದ್ಯಂತ ಸಂಘರ್ಷದ ಹಲವು ಕ್ಷೇತ್ರಗಳನ್ನು ಸೃಷ್ಟಿಸಿದೆ. ಇಡೀ ವಿಶ್ವವನ್ನು ಆವರಿಸಿರುವ ಕರೊನಾ ಸೋಂಕಿನ ಬಗ್ಗೆ ಬಗ್ಗೆ ಸುಳ್ಳು ಹೇಳಿದೆ. ಟಿಬೆಟಿಯನ್ನರ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದೆ. ಚೀನಾದ ಕಮ್ಯುನಿಸ್ಟರು ಮಾಡುತ್ತಿರುವ ಅನಾಚಾರಗಳನ್ನು ನೆನಪಿಸಿಕೊಂಡರೆ, ಅವುಗಳ ಮುಂದೆ ನನ್ನ ಪ್ರಯಾಣವು ಕಷ್ಟಕರವೆಂದು ನಾನು ಭಾವಿಸುವುದಿಲ್ಲ “ಎನ್ನುತ್ತಾರೆ ಲೋಬ್ಸಾಂಗ್ ಜಿನ್ಪಾ.

    2008ರಲ್ಲಿ ಚೀನಾದ ಕಮ್ಯುನಿಸ್ಟರ ವಿರುದ್ಧ ಟಿಬೆಟ್‌ನ ಖಮ್ ತಾವುವಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕಾಗಿ ಇವರನ್ನು ಬಂಧಿಸಿ ಇಡಲಾಗಿತ್ತು. ತಮ್ಮನ್ನು ಎರಡು ವರ್ಷ ಇವರನ್ನು ಜೈಲಿನಲ್ಲಿ ಇರಿಸಿ ಹಿಂಸೆ ನೀಡಲಾಗಿತ್ತು. ಬಿಡುಗಡೆಯ ನಂತರವೂ ಕಮ್ಯುನಿಸ್ಟರು ತನ್ನ ಮೇಲೆ ನಿರಂತರ ಕಣ್ಗಾವಲು ಇಟ್ಟಿದ್ದರು. ನಂತರ ತಾನು ನೇಪಾಳದ ಮೂಲಕ ಟಿಬೆಟ್‌ನಿಂದ ಪಲಾಯನ ಮಾಡಿ ಭಾರತದ ಧರ್ಮಶಾಲಾದಲ್ಲಿ ವಾಸಿಸಿದೆ ಎಂದು ಸ್ಮರಿಸಿಕೊಳ್ಳುತ್ತಾರೆ ಜಿನ್ಪಾ.

    ಟಿಬೆಟ್‌ನ ಸ್ಥಿತಿಯನ್ನು ಸೌಹಾರ್ದಯುತವಾಗಿ ಪರಿಹರಿಸದ ಹೊರತು, ಭಾರತ ಮತ್ತು ಚೀನಾದೊಂದಿಗಿನ ಗಡಿ ಸಮಸ್ಯೆಗಳು ಮುಗಿಯುವುದಿಲ್ಲ” ಎನ್ನುವುದು ಅವರ ಅಭಿಮತ. ಚೀನಾ ವಿರುದ್ಧದ ತನ್ನ ಈ ಹೊಸ ಪ್ರಯೋಗ ಯಶಸ್ವಿಯಾಗುವ ಭರವಸೆಯನ್ನು ಜಿನ್ಪಾ ಹೊಂದಿದ್ದಾರೆ. ಸಾಧ್ಯವಾದ ಕಡೆಗಳಲ್ಲೆಲ್ಲಾ ಚೀನಾ ಕಮ್ಯುನಿಸಂ ವಿರುದ್ಧ ಎಳೆಎಳೆಯಾಗಿ ಬಿಚ್ಚಿಡುವುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್‌)

    ಗಲ್ವಾನ್‌ ಘರ್ಷಣೆ: ಸತ್ತವರ ಸಂಖ್ಯೆ ಮುಚ್ಚಿಡಲು ಛೇ ಇದೆಂಥ ನೀಚ ಕೃತ್ಯ!

    ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts