More

    ಪರಿಸರವಾದಿ, ತೇರಿ ಸಂಸ್ಥೆಯ ಮಾಜಿ ಮುಖ್ಯಸ್ಥ ಆರ್.ಕೆ.ಪಚೌರಿ ನಿಧನ

    ನವದೆಹಲಿ: ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೇರಿ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಪರಿಸರವಾದಿ ಆರ್​.ಕೆ.ಪಚೌರಿ(79) ಅವರು ಗುರುವಾರ ರಾತ್ರಿ ಸಾವಿಗೀಡಾಗಿದ್ದಾರೆ.

    ಆರ್​.ಕೆ.ಪಚೌರಿ ಮೃತರಾಗಿರುವ ವಿಚಾರವನ್ನು ತೇರಿ ಸಂಸ್ಥೆಯ ಮಹಾನಿರ್ದೇಶಕರಾದ ಅಜಯ್ ಮಥೂರ್​ ಅವರು ಗುರುವಾರ ರಾತ್ರಿ ಖಚಿತಪಡಿಸಿದ್ದಾರೆ.

    ತೇರಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಆರ್​.ಕೆ. ಪಚೌರಿ ಅವರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಇಂತಹ ದುಃಖದ ಸಂದರ್ಭದಲ್ಲಿ ಇಡೀ ತೇರಿ ಕುಟುಂಬ ಪಚೌರಿ ಅವರು ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ತೇರಿ ಸಂಸ್ಥೆ ತನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದೆ.

    ತೇರಿ ಸಂಸ್ಥೆ ಇಂದು ಏನಾಗಿದೆ ಎಂದರೆ ಅದಕ್ಕೆ ಪಚೌರಿ ಅವರ ನಿರಂತರ ಪರಿಶ್ರಮವೇ ಕಾರಣ. ಸಂಸ್ಥೆಯನ್ನು ಮುನ್ನಡೆಸಿ ಸುಸ್ಥಿರ ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಪಚೌರಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಅಜಯ್​ ಮಥೂರ್​ ಹೇಳಿದ್ದಾರೆ. 2015ರಲ್ಲಿ ಪಚೌರಿ ಅವರಿಂದ ತೆರವಾದ ಮಹಾನಿರ್ದೇಶಕ ಸ್ಥಾನಕ್ಕೆ ಅಜಯ್​ ಮಥೂರ್​ ನೇಮಕವಾದರು.

    ಜಾಗತಿಕ ಸುಸ್ಥಿರ ಬೆಳವಣಿಗೆಗೆ ಪಚೌರಿ ಅವರ ಕೊಡಗೆಗೆ ಸಾಟಿಯಿಲ್ಲ. ಹವಮಾನ ಬದಲಾವಣೆಯ ಅಂತರಸರ್ಕಾರಿ ಸಮಿತಿಯಲ್ಲಿನ ಇವರ ನಾಯಕತ್ವದಿಂದಾಗಿ ಇಂದು ಹವಾಮಾನ ಬದಲಾವಣೆ ಮೇಲಿನ ಚರ್ಚೆಗೆ ಅಡಿಗಲ್ಲು ಹಾಕಿದಂತಾಗಿದೆ ಎಂದು ತೇರಿ ಸಂಸ್ಥೆಯ ಚೇರ್ಮನ್​ ಹೇಳಿದ್ದಾರೆ.

    ಪಚೌರಿ ಅವರು ನವದೆಹಲಿಯ ಎಸ್ಕಾರ್ಟ್​ ಹಾರ್ಟ್ ಸಂಸ್ಥೆಗೆ ಬಹು ದಿನಗಳ ಹಿಂದೆಯೇ ದಾಖಲಾಗಿದ್ದರು.​ ಅವರನ್ನು ಮಂಗಳವಾರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts