More

    ನಾನು ಆ ಮಾತನ್ನು ಹೇಳೇ ಇಲ್ಲ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರಿಂದ ಸ್ಪಷ್ಟನೆ

    ಬೆಂಗಳೂರು: ಏನಾದರೊಂದು ಹೇಳುವುದು, ಅದು ಇನ್ನೇನೋ ಆಗಿ ಅರ್ಥೈಸಲ್ಪಡುವುದು, ಬಳಿಕ ಅದಕ್ಕೊಂದು ಸಮಜಾಯಿಷಿ, ಸಮರ್ಥನೆ ಇಲ್ಲವೇ ಸ್ಪಷ್ಟನೆ ಕೊಡುವುದು ರಾಜಕಾರಣದಲ್ಲಿ ಸರ್ವೇಸಾಮಾನ್ಯ. ಅಂಥದ್ದೇ ಒಂದು ಸಂದರ್ಭವನ್ನು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಕೂಡ ಎದುರಿಸುವಂತಾಗಿದೆ.

    ತಮ್ಮ ಹೇಳಿಕೆಯೊಂದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿರುವ ದೇವೇಗೌಡರು, ಆ ರೀತಿ ನಾನು ಹೇಳಿಲ್ಲ ಎಂಬುದರ ಜತೆಗೆ, ತಾವು ಹೇಳಿದ್ದೇನು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಕೇರಳದವರಿಗೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಆಗಿರುವ ಗೊಂದಲವನ್ನು ನಿವಾರಿಸಲು ಯತ್ನಿಸಿದ್ದಾರೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಸಿಪಿಎಂ ಕುರಿತ ನನ್ನ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಗೊಂದಲವೊಂದು ಉಂಟಾಗಿದೆ. ನಾನು ಯಾವ ಅರ್ಥದಲ್ಲಿ ಮಾತನಾಡಿದ್ದೇನೆ ಎಂಬುದನ್ನು ನನ್ನ ಕಮ್ಯುನಿಷ್ಟ್ ಗೆಳೆಯರು ಅರ್ಥ ಮಾಡಿಕೊಂಡಂತಿಲ್ಲ. ಬಿಜೆಪಿ-ಜೆಡಿಎಸ್​ ಮೈತ್ರಿಯನ್ನು ಕೇರಳದಲ್ಲಿ ಸಿಪಿಎಂ ಬೆಂಬಲಿಸುತ್ತದೆ ಎಂದು ನಾನು ಹೇಳೇ ಇಲ್ಲ ಎಂದಿದ್ದಾರೆ.

    ಬಿಜೆಪಿಯೊಂದಿಗಿನ ನಮ್ಮ ಮೈತ್ರಿ ನಂತರ ಕರ್ನಾಟಕದ ಹೊರಗಿನ ನನ್ನ ಪಕ್ಷದ ಘಟಕಗಳಲ್ಲಿನ ವಿಷಯಗಳು ಇತ್ಯರ್ಥವಾಗದ ಕಾರಣ ಕೇರಳದಲ್ಲಿ ನನ್ನ ಪಕ್ಷದ ಘಟಕವು ಎಲ್‌ಡಿಎಫ್ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದಷ್ಟೇ ನಾನು ಹೇಳಿದ್ದೇನೆ ಎಂಬುದಾಗಿ ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.

    ‘ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ?’: ಬೆಂಗಳೂರು ಪೊಲೀಸರ ಜತೆ ಪಾಕ್​ ಯುವಕನ ವಾಗ್ವಾದ

    ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts