More

    ಎಸ್​ಐಗೆ ಧಮ್ಕಿ ಹಾಕುತ್ತಲೇ ನಾಲಗೆ ಹರಿಯಬಿಟ್ಟ ಮಾಜಿ ಶಾಸಕ ಸುರೇಶ್​ಗೌಡ! ಒಂದು ಸಲ ನಿಮ್ಮ ಸ್ಟೇಷನ್ ಬಳಿ ಮಲಗಿದ್ದೆ, ಇನ್ನೊಂದು ಬಾರಿ ಮಲಗಬೇಕಾಗುತ್ತೆ…

    ತುಮಕೂರು: ಜೆಡಿಎಸ್ ಪಂಚರತ್ನ ರಥಯಾತ್ರೆ ಹಿನ್ನೆಲೆ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಜೆಡಿಎಸ್​ ಕಾರ್ಯಕರ್ತರು ಹಾಕಿದ್ದ ಪ್ಲೆಕ್ಸ್​ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಪ್ರಕರಣ ಪೊಲೀಸ್​ ಮೆಟ್ಟಿಲೇರುತ್ತಿದ್ದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ನಾಲಗೆ ಹರಿಯಬಿಟ್ಟಿದ್ದು, ವಿಡಿಯೋ ವೈರಲ್​ ಆಗಿದೆ.

    ಕ್ಯಾತ್ಸಂದ್ರ ಪೊಲೀಸ್ ಠಾಣೆ ಸಬ್​ಇನ್​ಸ್ಪೆಕ್ಟರ್​ಗೆ ಫೋನ್​ನಲ್ಲೇ ಸುರೇಶ್​ಗೌಡ ಅವಾಜ್ ಹಾಕಿದ್ದಾರೆ. ‘ಅವನ್ಯಾವನೋ ಪಿಎ ಸುರೇಶ್ ಅಂತ ಇದ್ದಾನೆ. ಮೊದಲು ಆ ಸೂ…ಮಗನನ್ನ ಒದ್ದು ಎಳೆದು ತರ್ಬೇಕು. ಇಲ್ಲಾಂದ್ರೆ ನಾನು ಸುಮ್ಮನಿರಲ್ಲ. ನಿಮ್ಮ‌ ಸ್ಟೇಷನ್ ಮುಂದೆ ಬಂದು ಧರಣಿ ಮಾಡ್ತೇನೆ. ನಿನ್ನೆಯೇ ನಾನು ಪ್ರತಿಭಟನೆ ಮಾಡ್ತಿದ್ದೆ. ನಮ್ಮ ಹುಡುಗರನ್ನ ಕುಮಾರಸ್ವಾಮಿಯ ಕಾರಿಗೆ ಅಡ್ಡ ಮಲಗಿಸ್ತಿದ್ದೆ. ಪಾಪ ಹೋಗ್ಲಿ ಬಂದಿದ್ದಾನೆ ಮಾಡ್ಕೊಂಡು ಹೋಗ್ಲಿ ಅಂತ ಬಿಟ್ಟಿದ್ದೀನಿ. ನಿನ್ಗೆ 24 ಗಂಟೆ ಟೈಂ ಕೊಡ್ತೇನೆ. ಅಷ್ಟರೊಳಗೆ ಮೊದಲು ಒದ್ದು ಎಳೆದು ತರ್ಬೇಕು ಅವನನ್ನ. ನೆಲಮಂಗಲಕ್ಕೆ ಬಂದ್ರೆ ತೋರಿಸ್ತಾನಂತೆ. ಅವನೇನು ತೋರ್ಸೋದು ನಾನು‌ ತೋರಿಸ್ತೀನಿ. ಜೆಡಿಎಸ್​ನವರೇನು ದಬ್ಬಾಳಿಕೆ ಮಾಡೋಕೆ ಬರ್ತಾರಾ ಇಲ್ಲಿ? ನಾನು ಗಂಡಸು ಅಂತ ಹುಟ್ಟಿದ್ದೇನೆ. ಇಲ್ಲಾಂದ್ರೆ ಪರಿಣಾಮ ಸರಿಯಿರಲ್ಲ. ಅಲ್ ರೆಡಿ ಒಂದು ಸಲ ನಿಮ್ಮ ಸ್ಟೇಷನ್ ಬಳಿ ಬಂದು ಮಲಗಿದ್ದೆ. ಇನ್ನೊಂದು ಬಾರಿ ಬಂದು ಮಲಗಬೇಕಾಗುತ್ತೆ’ ಎಂದು ಸಬ್​ಇನ್​ಸ್ಪೆಕ್ಟರ್​ಗೆ ಸುರೇಶ್​ಗೌಡ ಅವಾಜ್​ ಹಾಕಿದ್ದಾರೆ.

    ಮೊನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಆಗಮಿಸಿತ್ತು. ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿತ್ತು. ದಾರಿಯುದ್ದಕ್ಕೂ ಕುಮಾರಸ್ವಾಮಿಗೆ ಸ್ವಾಗತ ಕೋರಿ ಪ್ಲೆಕ್ಸ್​ಗಳನ್ನು ಕಟ್ಟಲಾಗಿತ್ತು. ಈ ಪೈಕಿ ತುಮಕೂರಿನ ಬ್ಯಾತ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದರು. ಈ ವಿಚಾರಕ್ಕೆ ಜೆಡಿಎಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.

    ಬೆಂಗಳೂರಿನಾದ್ಯಂತ ಪೊಲೀಸ್​ ಕಣ್ಗಾವಲು: ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್​, ವಾಚ್ ಟವರ್- ವುಮೆನ್ ಸೇಫ್ ಹೌಸ್ ನಿರ್ಮಾಣ

    HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

    ಶ್ರೀರಾಮ ಮತ್ತು ಹನುಮಂತ ಬಿಜೆಪಿಯ ಸ್ವತ್ತಲ್ಲ: ಸ್ವಪಕ್ಷದ ವಿರುದ್ಧವೇ ಉಮಾಭಾರತಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts