More

  ಬೆಂಗಳೂರಿನಾದ್ಯಂತ ಪೊಲೀಸ್​ ಕಣ್ಗಾವಲು: ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್​, ವಾಚ್ ಟವರ್- ವುಮೆನ್ ಸೇಫ್ ಹೌಸ್ ನಿರ್ಮಾಣ

  ಬೆಂಗಳೂರು: ಹೊಸ ವರ್ಷಾಚರಣೆಗೆ ಸಿಲಿಕಾನ್​ ಸಿಟಿ ಸಜ್ಜಾಗಿದ್ದು, ರಾಜಧಾನಿಯ ಮೂಲೆ ಮೂಲೆಯಲ್ಲೂ ಪೊಲೀಸರ ಕಣ್ಗಾವಲಿದೆ. ಕಹಿನೆನಪುಗಳನ್ನು ಮರೆತು ಹೊಸ ಉತ್ಸಾಹದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಾಗರಿಕರು ಮುಂದಾಗಿದ್ದಾರೆ. ಮತ್ತೊಂದೆಡೆ ಹೋಟೆಲ್​, ಪಬ್​, ಪಾರ್ಟಿ ಹಾಲ್​ಗಳಲ್ಲಿ ವಿಶೇಷ ಆಫರ್​ಗಳಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

  ಮುಖ್ಯವಾಗಿ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ‌ ರೋಡ್​ನಲ್ಲಿ ನಾಲ್ವರು ಡಿಸಿಪಿ ನೇತೃತ್ವದಲ್ಲಿ ಭಧ್ರತೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 1 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬ್ರಿಗೇಡ್​ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 2 ರಸ್ತೆಗಳ ಜಂಕ್ಷನ್​ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಮೆಟಲ್​ ಡಿಟೆಕ್ಟರ್​ ಉಪಕರಣವನ್ನು ಅಳವಡಿಸಲಾಗಿದೆ. ಬ್ರಿಗೇಡ್​ ರಸ್ತೆಯಿಂದ ನಿರ್ಗಮಿಸುವವರು ಅಪೇರಾ ಜಂಕ್ಷನ್​ನಲ್ಲಿ ಹೊಗಬಹುದು.

  ಮಹಿಳೆಯರ ಸುರಕ್ಷತೆಗೆ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಈ ಸೌಲಭ್ಯ ಬಳಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಪೊಲೀಸರು ಸಲಹೆ ನೀಡಿದ್ದಾರೆ. ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶವಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ.

  ಪಂಚತಾರಾ ಹೋಟೆಲ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಮತ್ತು ಕ್ಲಬ್​ಗಳು ಸೇರಿ ವರ್ಷಾಚರಣೆಗೆ ವಿವಿಧ ಕಾರ್ಯಕ್ರಮ ಆಯೋಜಿಸಿರುವ ಸಂಬಂಧಪಟ್ಟವರಿಗೆ ಮುಂಜಾಗ್ರತೆ ವಹಿಸುವಂತೆ ಪೊಲೀಸರು ಖಡಕ್​ ಸೂಚಿಸಿದ್ದಾರೆ. ಪ್ರಮುಖ ಸ್ಥಳಗಳಾದ ಬ್ರಿಗೇಡ್​ ರಸ್ತೆ, ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ ಹಾಗೂ ವೈಟ್​ಫೀಲ್ಡ್​ಗಳಲ್ಲಿ ಜನ ಸಮೂಹ ನಿಯಂತ್ರಣಕ್ಕೆ ಭದ್ರತೆ, ತಪಾಸಣಾ ವ್ಯವಸ್ಥೆ ಮಾಡಲಾಗಿದೆ. ವಾಚ್​ ಟವರ್​ ನಿರ್ಮಿಸಿ ಬೈನಾಕುಲರ್​ ಉಪಕರಣಗಳಲ್ಲಿ ಪೊಲೀಸರು ಬಳಸಲಿದ್ದಾರೆ.

  ಭದ್ರತೆ ಸಲುವಾಗಿ ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್​ ರಸ್ತೆ, ಇಂದಿರಾನಗರ ಸೇರಿ ಕೆಲವು ಕಡೆ ಶನಿವಾರ ರಾತ್ರಿ 20 ಡ್ರೋನ್​ ಕ್ಯಾಮರಾಗಳಿಂದಲೂ ನಿಗಾ ವಹಿಸಲಾಗುತ್ತದೆ. ಪ್ರಮುಖ ಸ್ಥಗಳಲ್ಲಿ ಶ್ವಾನ ದಳ, ಬಾಂಬ್​ ನಿಷ್ಕ್ರಿಯ ದಳಗಳಿಂದ ತಪಾಸಣೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್​ ಆಯುಕ್ತ ಸಿ.ಎಚ್​. ಪ್ರತಾಪ್​ ರೆಡ್ಡಿ ಮಾಹಿತಿ ನೀಡಿದ್ದಾರೆ.

  10 ಸಾವಿರ ಪೊಲೀಸ್​: ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಪಿಎಸ್​ಐ, 800 ಎಎಸ್​ಐ, 1800 ಎಚ್​ಸಿ ಹಾಗೂ 5200 ಕಾನ್​ಸ್ಟೆಬಲ್​ಗಳು ಸೇರಿ ಒಟ್ಟು 8624 ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಗರದ ಪೊಲೀಸರ ಜೊತೆ ಹೊರ ಜಿಲ್ಲೆಗಳು ಹಾಗೂ ತರಬೇತಿಯಲ್ಲಿರುವ 20 ಎಸಿಪಿ, 50 ಪಿಐ, 50 ಪಿಎಸ್​ಐ ಮತ್ತು 1300 ಪೊಲೀಸರ ಸಹ ನಿಯುಕ್ತಗೊಂಡಿದ್ದಾರೆ. 52 ಕೆಎಸ್​ಆರ್​ಪಿ ಹಾಗೂ 25 ಸಿಎಆರ್​ ತುಕಡಿಗಳನ್ನು ಭದ್ರತೆಗೆ ಬಳಸಲಾಗಿದೆ. ಬ್ರಿಗೇಡ್​ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್​ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 4 ಡಿಸಿಪಿ, 10 ಎಸಿಪಿ, 30 ಪಿಐಗಳು ಸೇರಿ 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಕೋರಮಂಗಲ, ಇಂದಿರಾನಗರ ಮತ್ತು ವೈಟ್​ಫೀಲ್ಡ್​ ಪ್ರದೇಶಗಳಲ್ಲಿ 4 ಡಿಸಿಪಿ, 10 ಎಸಿಪಿ, 25 ಪಿಐ ಸೇರಿದಂತೆ 2500 ಪೊಲೀಸರಿಗೆ ಭದ್ರತೆ ಜವಾಬ್ದಾರಿ ವಹಿಸಲಾಗುತ್ತಿದೆ.

  112ಕ್ಕೆ ಕರೆ ಮಾಡಿ: ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ, ಶಂಕಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭ್ಯವಾದರೆ ಪೊಲೀಸ್​ ನಿಯಂತ್ರಣ ಕೊಠಡಿ 112ಗೆ ಕರೆ ಮಾಡಿ ಎಂದು ನಗರ ಪೊಲೀಸ್​ ಆಯುಕ್ತ ಸಿ.ಎಚ್​. ಪ್ರತಾಪ್​ ರೆಡ್ಡಿ ತಿಳಿಸಿದ್ದಾರೆ.

  ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್​: ನಾಗರಿಕರ ಹಿತದೃಷ್ಟಿಯಿಂದ ಶನಿವಾರ ರಾತ್ರಿ 9ರಿಂದ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ನಗರದ ಎಲ್ಲ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 10 ರಿಂದಲೇ ಡ್ರಂಕ್​ ಆ್ಯಂಡ್​ ಡ್ರೈವ್​ ತಪಾಸಣೆ ನಡೆಯಲಿದೆ. ವೀಲ್ಹಿಂಗ್​, ಅತಿವೇಗದ ಚಾಲನೆ ಮಾಡುವವರ ಬಗ್ಗೆ ಪೊಲೀಸ್​ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಎಂದು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.

  ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

  HDKಗೆ ನಾಣ್ಯ​, ನೇಗಿಲು, ಸ್ಕೂಲ್​ ಬ್ಯಾಗ್​, ಕಬ್ಬು, ಬೆಲ್ಲದ ಹಾರ… ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪಂಚರತ್ನ ಯಾತ್ರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts