More

    ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ

    ಕುಮಟಾ: ನಾನು ರಾಜಕೀಯ ದಿಂದಲೂ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು.

    ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಮೋಸ ಮಾಡಿದೆ. ಹೀಗಾಗಿ, ಪಕ್ಷದ ಮೇಲೆ ನನಗೆ ಯಾವುದೇ ಗೌರವ, ನಿಷ್ಠೆ ಉಳಿದುಕೊಂಡಿಲ್ಲ ಎಂದರು.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಯ ಕ್ಷಣದವರೆಗೂ ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಸಿಗಲಿಲ್ಲ.

    ರಾಜಕೀಯ ವೇ ಬೇಡ

    ಬಂಡಾಯ ನಿಂತಿದ್ದರಿಂದ ನನಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಹೇಳಿದರು.

    ಮುಂದೆ ಎಂಎಲ್‌ಸಿ ಅಥವಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಮನ ಒಲಿಸುವ ಪ್ರಯತ್ನ ಮಾಡಿದರು. ನನಗೆ ಯಾವುದೇ ಅನುಕಂಪವೂ ಬೇಡ, ಹುದ್ದೆಯೂ ಬೇಡ ಎಂದಿರುವುದಾಗಿ ತಿಳಿಸಿದರು.
    ಕಾರ್ಯಕರ್ತರು ಪಕ್ಷೇತರವಾಗಿ ನಿಲ್ಲಲೇಬೇಕೆಂದು ಒತ್ತಾಯ ಮಾಡಿದ್ದರಿಂದ ನಾಮಪತ್ರ ಸಲ್ಲಿಸಿದ್ದೆ. ಆದರೆ, ನಮ್ಮ ಜತೆಗಿದ್ದ ಅನೇಕರು ಕ್ರಮೇಣ ಪಕ್ಷದ ಅಕೃತ ಅಭ್ಯರ್ಥಿ ನಿವೇದಿತ್ ಆಳ್ವಾ ಕಡೆಗೆ ಹೋಗಿದ್ದಾರೆ.

    ಈಗ ಚುನಾವಣೆ ಎದುರಿಸಲು ಮತ್ತು ಸಂಘಟನೆಗೆ ನನಗೆ ಸಮಯ ಸಾಲದು. ಹೀಗಾಗಿ ನಾಮಪತ್ರ ಹಿಂಪಡೆಯುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ನನಗೆ ಬೆಂಬಲ ನೀಡಿದ್ದರು.

    ಅವರೂ ನಾಮಪತ್ರ ಸಲ್ಲಿಸಬಹುದಿತ್ತು ಎಂದರು. ರವಿಕುಮಾರ ಮೋಹನ ಶೆಟ್ಟಿ, ವಿ.ಎಲ್. ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಸುರೇಖಾ ವಾರೇಕರ, ಮಧುಸೂಧನ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts