More

    ಶ್ರೀ ಮಹಾರುದ್ರ ಮಹಾಯಜ್ಞ ಮಹೋತ್ಸವ 15ರಿಂದ

    ಗಂಗಾವತಿ: ವಿಶ್ವ ಕಲ್ಯಾಣಕ್ಕಾಗಿ ನಗರದ ಅಮರಜ್ಯೋತಿ ಕಲ್ಯಾಣ ಮಂಟಪದ ಮೈದಾನದಲ್ಲಿ ಶ್ರೀ ಮಹಾರುದ್ರ ಮಹಾಯಜ್ಞ ಮಹೋತ್ಸವ ನ.15ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವ ಸಮಿತಿ ಸಂಚಾಲಕ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ಹಿಮಾಲಯದ ತಪಸ್ವಿ ನಾಗಸಾಧುಗಳ ನೇತೃತ್ವದಲ್ಲಿ ಮಹಾಯಜ್ಞ

    ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ವಿಶಿಷ್ಟ ರೀತಿಯಲ್ಲಿ ರೂಪಿಸಿರುವ ಹೋಮ ಕುಂಡಲ ಮಂಟಪ ವ್ಯವಸ್ಥೆ ಶನಿವಾರ ಪರಿಶೀಲಿಸಿ ಮಾತನಾಡಿದರು. ಹಿಮಾಲಯದ ತಪಸ್ವಿ ನಾಗಸಾಧುಗಳ ನೇತೃತ್ವದಲ್ಲಿ ಮಹಾಯಜ್ಞ ಜರುಗಲಿದ್ದು, ನ.15ರಂದು ಕಲಶ ಯಾತ್ರೆ, ಪೂಜಾಮಂಟಪ ಪ್ರವೇಶ, ಅಗ್ನಿ ಪ್ರತಿಷ್ಠಾಪನೆ, ಮಹಾರತಿ, ನ.16, 17 ಮತ್ತು 18ರಂದು ದೇವತೆಗಳ ಆರಾಧನೆ, ಮಹಾರುದ್ರಾಭಿಷೇಕ, ಯಜ್ಞ ಪ್ರಾರಂಭ, ನ.19ರಂದು ಮಹಾರುದ್ರಾಭಿಷೇಕ, ಸಾಧು ಸಂತರ ಪಾದಪೂಜೆ, ನ.20ರಂದು ಮಹಾರುದ್ರಾಭಿಷೇಕ, ಮಹಾಪೂರ್ಣಾಹುತಿ, ಧರ್ಮಸಭೆ, ಶೋಭಾಯಾತ್ರೆ ಮತ್ತು ಸಾಧು ಸಂತರಿಗೆ ಸನ್ಮಾನ ಜರುಗಲಿದೆ ಎಂದರು.

    ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ಬಗ್ಗೆ ಡಿ. ಸುಧಾಕರ್​ ಪ್ರತಿಕ್ರಿಯೆ

    ನಿತ್ಯವೂ ಮಹಾರತಿ ಮತ್ತು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಆರಂಭದ ದಿನದಂದು ನಗರದ ಶ್ರೀದುರ್ಗಾದೇವಿ ದೇವಾಲಯದಿಂದ ಹೋಮ ಮಂಟಪದವರೆಗೆ 501 ಕುಂಭಗಳ ಮೆರವಣಿಗೆ ನಡೆಯಲಿದೆ. ಕುಷ್ಟಗಿಯ ಅಮರನಾಥೇಶ್ವರ ಮಹಾದೇವರ ಮಠದ ಪೀಠಾಧಿಪತಿ ಮಹಾಂತ ಸಹದೇವಾನಂದ ಗಿರಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದರು.

    6 ದಿನಗಳ ಮಹಾರುದ್ರ ಯಜ್ಞದ ವಿಶೇಷ, ಹೋಮಕುಂಡಲ ವಿಶಿಷ್ಟತೆ ಮತ್ತು ನಾಗ ಸಾಧುಗಳ ಭಾಗವಹಿಸುವಿಕೆ ಕುರಿತು ಹಿಂದು ಜಾಗರಣೆ ವೇದಿಕೆ ಪ್ರತಿನಿಧಿ ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿದರು. ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ವೆಂಕಟೇಶ ಅಮರಜ್ಯೋತಿ, ನರಸಿಂಗರಾವ್ ಕುಲ್ಕರ್ಣಿ, ಅಯ್ಯನಗೌಡ ಹೇರೂರು, ಕಾಶೀನಾಥ ಚಿತ್ರಗಾರ, ವೀರೇಶ, ಶ್ರೀನಿವಾಸ ಧೂಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts