More

    ಬಿಜೆಪಿಯವರ ನಾಟಕ ಈ ಬಾರಿ ನಡೆಯದು

    ಯಲಬುರ್ಗಾ: ತಾಲೂಕಿನ ನಾನಾ ಗ್ರಾಮಗಳ ಕಾರ್ಯಕರ್ತರು ಬಿಜೆಪಿ ತೊರೆದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ಎಸ್ಟಿ ಮೋರ್ಚಾದ ಶಶಿಧರ ಗಡಾದ ಹಾಗೂ ಮುರಡಿ, ಮಾಟಲದಿನ್ನಿ, ಮಂಗಳೂರು, ಮಂಡಲಮರಿಯ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು.

    ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಳೆದೆರಡು ತಿಂಗಳಿಂದಲೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪಕ್ಷ ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

    ಎಂಎಲ್‌ಎಗೆ ಆಶೀರ್ವಾದ ಮಾಡಿ: ಕ್ಷೇತ್ರದ ಮತದಾರರು ಯಾವುದಕ್ಕೂ ಮನ್ನಣೆ ನೀಡದೆ ತಾಲೂಕಿನ ಸವಾರ್ಂಗೀಣ ಅಭಿವೃದ್ಧಿಗಾಗಿ ಈ ಸಲ ಈ ಸಲ ಚುನಾವಣೆಯಲ್ಲಿ ನನಗೆ ತಾವೆಲ್ಲರೂ ಆಶೀರ್ವಾದ ಮಾಡಬೇಕು. ನಾನು ಗೆದ್ದ ಮೇಲೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ ಎಂದು ರಾಯರಡ್ಡಿ ಜನರಲ್ಲಿ ಮನವಿ ಮಾಡಿದರು.
    ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಮಂತ್ರಿಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಗಳನ್ನು ಮಾಡಿದ್ದೇನೆ. ಬಿಜೆಪಿಯವರು ನಾವು ಮಾಡಿದ್ದೇವೆಂದು ಜನರ ಮುಂದೆ ಸುಳ್ಳು ಹೇಳಲು ಹೊರಟಿದ್ದಾರೆ. ಇಂಥವರ ಆಟ ಈ ಸಲ ನಡೆಯುವುದಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

    ಎಐಸಿಸಿ ಮಹಿಳಾ ಘಟಕದ ವೀಕ್ಷಕಿ ನಿಶಾ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕೆಪಿಸಿಸಿ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ, ರಾಜ್ಯ ವಕ್ತಾರೆ ಶೈಲಜಾ ಹಿರೇಮಠ, ಮಹಿಳಾ ಬ್ಲಾಕ್ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್, ಪ್ರಮುಖರಾದ ಅಶೋಕ ತೋಟದ, ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ರೇವಣಪ್ಪ ಹಿರೇಕುರುಬರ್, ಸುಧೀರ್ ಕೊರ್ಲಳ್ಳಿ, ನಾಗರಾಜ ನವಲಹಳ್ಳಿ, ಜಯಶ್ರೀ ಕಂದಕೂರು, ವೀಣಾ ಅಂಗಡಿ, ಶರಣಗೌಡ ಬಸಾಪುರ, ಪುನೀತ್ ಕೊಪ್ಪಳ ಇತರರಿದ್ದರು.

    ಸಚಿವ ಹಾಲಪ್ಪ ಆಚಾರ್ ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ಸಿಎಂ ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಸ್ಲಿಂ ಸಮಾಜಕ್ಕಿದ್ದ ಮೀಸಲಾತಿಯನ್ನು ರದ್ದುಪಡಿಸಿರುವುದು ನಿಜಕ್ಕೂ ಸರಿಯಲ್ಲ.
    ಬಸವರಾಜ ರಾಯರಡ್ಡಿ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts