More

    ಪುರುಷರ ಕೌಂಟಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಳು ಈ ಸುಂದರಿ!

    ಹೋವ್ (ಸಸೆಕ್ಸ್): ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಡಿದ ಸೌಂದರ್ಯವತಿಯರಲ್ಲಿ ಒಬ್ಬರೆನಿಸಿದ ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟುಗಾರ್ತಿ ಸಾರಾ ಟೇಲರ್ ಅವರು ಈಗ ಪುರುಷರ ಕ್ರಿಕೆಟ್ ತಂಡವೊಂದರ ತರಬೇತಿ ಸಿಬ್ಬಂದಿ ಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಕೌಂಟಿ ಕ್ರಿಕೆಟ್ ಋತುವಿಗೆ ಅವರು ಸಸೆಕ್ಸ್ ಪುರುಷರ ತಂಡದ ವಿಕೆಟ್ ಕೀಪಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

    ಪುರುಷರ ಕ್ರಿಕೆಟ್‌ನಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದು ಹೊಸದೇನು ಅಲ್ಲ. ಆದರೆ ಮಹಿಳೆಗೆ ಇಷ್ಟೊಂದು ಪ್ರತಿಷ್ಠಿತ ತಂಡದ ಕೋಚಿಂಗ್ ಬಳಗ ಸೇರುವ ಅವಕಾಶ ಒಲಿದಿರುವುದು ಇದೇ ಮೊದಲೆನಿಸಿದೆ. 31 ವರ್ಷದ ಸಾರಾ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 226 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದು, ವಿಕೆಟ್ ಹಿಂದೆ 232 ಬಲಿಗಳನ್ನು ಪಡೆದಿದ್ದಾರೆ. ಜತೆಗೆ 6,500ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಅವರು 2019ರಲ್ಲಿ ದಿಢೀರ್ ವಿದಾಯ ಪ್ರಕಟಿಸಿದ್ದರು.

    ಇದನ್ನೂ ಓದಿ: ಮದುವೆಯ ಮೂಲಕ ಸಚಿನ್, ಕೊಹ್ಲಿ, ಪಾಂಡ್ಯ, ಧವನ್ ಸಾಲಿಗೆ ಸೇರಿದ ಬುಮ್ರಾ!

    ವಿಕೆಟ್ ಕೀಪಿಂಗ್‌ನಲ್ಲಿ ಅಪಾರವಾದ ಅನುಭವ ಹೊಂದಿರುವ ಸಾರಾ ಟೇಲರ್, ಸಸೆಕ್ಸ್ ತಂಡದ ಯುವ ವಿಕೆಟ್ ಕೀಪರ್‌ಗಳಿಗೆ ಕೌಶಲಗಳನ್ನು ಕಲಿಸಿಕೊಡಲಿದ್ದಾರೆ. ಸಾರಾ ಟೇಲರ್ ನೇಮಕವನ್ನು ತಂಡದ ಮುಖ್ಯ ಕೋಚ್ ಜೇಮ್ಸ್ ಕಿರ್ಟ್‌ಲಿ ಕೂಡ ಸ್ವಾಗತಿಸಿದ್ದಾರೆ. ಭಾರತ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಪುರುಷರ ಕ್ರಿಕೆಟ್‌ನಲ್ಲಿ ಮಹಿಳೆಯರ ಪ್ರವೇಶಕ್ಕೆ ಮೆಚ್ಚುಗೆಯಾಗಿ, ‘ಇಲ್ಲಿದೆ ನೋಡಿ ಬದಲಾವಣೆ’ ಎಂದು ಟ್ವೀಟಿಸಿದ್ದಾರೆ.

    PHOTO| ಕ್ರಿಕೆಟ್ ನಿರೂಪಕಿ ಸಂಜನಾಗೆ ಬೋಲ್ಡಾದ ಬುಮ್ರಾ, ಗೋವಾದಲ್ಲಿ ಮದುವೆ

    ಮತ್ತೆ ಬಸಿರಾದ ಗೀತಾ ಬಾಸ್ರಾ, 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts