More

    ಸಿದ್ದರಾಮಯ್ಯ ಜೀವನಾಧರಿತ ಸಿನಿಮಾದ ಪೋಸ್ಟರ್ ರಿಲೀಸ್‌‌ ; ಲೀಡರ್ ರಾಮಯ್ಯ ಚಿತ್ರದಲ್ಲಿದೇ ಲವ್ ಸ್ಟೋರಿ

    ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಜೀವನಾಧರಿತ ಕಥೆಯನ್ನು ಆಧರಿಸಿ ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೀಗ ರಾಮನವಮಿ ಹಬ್ಬದ ಶುಭ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್‌ನ ಪೋಸ್ಟರ್ ರಿಲೀಸ್ ಆಗಿದೆ.

    ಚಿತ್ರಕ್ಕೆ ‘ಲೀಡರ್ ರಾಮಯ್ಯ’ ಎಂದು ಹೆಸರಿಡಲಾಗಿದ್ದು, ಸಿದ್ದರಾಮಯ್ಯ ಅಭಿಮಾನಿ ಸಂಘದಿಂದ ಸಿನಿಮಾದ ಮೊದಲ ಪೋಸ್ಟರ್​ನ್ನು ಸಿದ್ದರಾಮಯ್ಯ ನಿವಾಸದಲ್ಲಿ ಇಂದು(ಮಾ.30) ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನು ತಮಿಳಯ ನಟ ವಿಜಯ್​ ಸೇತುಪತಿ ಮಾಡಲಿದ್ದಾರೆ. ಚಿತ್ರವನ್ನು ಸತ್ಯರತ್ನಂ ನಿರ್ದೇಶಿಸಲಿದ್ದಾರೆ. ಹಯಾತ್ ಫೀರ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ಪಾಕ್​ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಬ್ಯಾನ್
    ಈ ಚಿತ್ರವನ್ನು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಲೀಡರ್ ರಾಮಯ್ಯ ಸಿನಿಮಾವು ಆಗಸ್ಟ್​​ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.

    ಆಗಸ್ಟ್ 3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬವಿದ್ದು, ಈ ದಿನವೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಪಾರ್ಟ್ 1 ಮತ್ತು ಪಾರ್ಟ್ 2 ಎರಡು ಭಾಗವಾಗಿ ಚಿತ್ರ ಬಿಡುಗಡೆಗೆ ಯೋಜನೆ ರೂಪಸಲಾಗಿದೆ. ಈ ಸಿನಿಮಾ ಅಂದಾಜು 30 ಕೋಟಿ ರೂ. ಬಜೆಟ್ ಆಗಲಿದೆ ಎಂದು ಲೀಡರ್ ರಾಮಯ್ಯ ಚಿತ್ರತಂಡ ಹೇಳಿಕೊಂಡಿದೆ.

    ಇದನ್ನೂ ಓದಿ: ಓದಿಕೋ ಮಗಳೇ ಎಂದಿದ್ದು ತಪ್ಪಾಯ್ತು..ಅಪ್ಪನ ಮಾತಿಗೆ ಮನನೊಂದು ಪ್ರಾಣ ಬಿಟ್ಟ ಮಗಳು!
    ಲೀಡರ್ ರಾಮಯ್ಯ ಸಿನಿಮಾದ ನಿರ್ದೇಶಕ ಸತ್ಯರತ್ನಂ ಮಾತನಾಡಿ, ಲೀಡರ್ ರಾಮಯ್ಯ ಚಿತ್ರದಲ್ಲಿ ಲವ್ ಸ್ಟೋರಿಯೂ ಇದೆ. ಶೇ.70% ಸಿದ್ದರಾಮಯ್ಯ ಜೀವನ ಚರಿತ್ರೆಯನ್ನ ಒಳಗೊಂಡಿರುವ ಚಿತ್ರ ಇದಾಗಿದೆ. ಬಾಲ್ಯದ ಜೀವನ ಮತ್ತು ರಾಜಕೀಯಕ್ಕೆ ಎಂಟ್ರಿಯಾಗುವ ಅಂಶ ಸಿನಿಮಾದಲ್ಲಿದೆ. ಬಾಕಿ 30% ಲವ್ ಸ್ಟೋರಿ ಕುರಿತಾದ ಅಂಶ ಸಿನಿಮಾದಲ್ಲಿ ಇದೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎಂದು ಹೇಳಿದ್ದಾರೆ.

    ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ದೈವ ನರ್ತಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts