More

    ಬಂಗಾರಪ್ಪ ವ್ಯಕ್ತಿತ್ವ ಎಲ್ಲರಿಗೂ ಮಾದರಿ

    ಸೊರಬ: ಸದಾ ಬಡವರ ಪರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರದ್ದು ಕಂಡುಕೇಳರಿಯದ ವ್ಯಕ್ತಿತ್ವ ಎಂದು ಅವರ ಆಪ್ತ ಸಹಾಯಕರಾಗಿದ್ದ ಎಚ್.ಆರ್.ನಾಗರಾಜ್ ಬಣ್ಣಿಸಿದರು.

    ಪಟ್ಟಣದ ವಿಶ್ವಾಸಿಗರ ಕ್ಷೇತ್ರ ಬಂಗಾರ ದೇಗುಲ ಉದ್ಯಾನದಲ್ಲಿ ಬಂಗಾರಪ್ಪ ಪ್ರತಿಮೆಗೆ ಶುಕ್ರವಾರ ಪುಷ್ಪನಮನ ಸಲ್ಲಿಸಿ ಮಾತನಾಡಿ, ಬಂಗಾರಪ್ಪ ರಾಜ್ಯದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದರು. ರಾಜ್ಯದ ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೂ ಅಭಿಮಾನಿಗಳ ದಂಡೇ ಹರಿದುಬರುತ್ತಿತ್ತು ಎಂದರು.

    ಕಂದಾಯ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತ ಗ್ರಾಮವೊಂದಕ್ಕೆ ತೆರಳಲು ರಸ್ತೆ ಸಂಪರ್ಕವೇ ಇರಲಿಲ್ಲ. ಈ ವೇಳೆ ಎತ್ತಿನ ಗಾಡಿಯಲ್ಲಿ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಜತೆಗೆ ಅಂದು ಅವರು ಸ್ಪಂದಿಸಿದ ರೀತಿ ಮಾದರಿ ಎಂದು ಹೇಳಿದರು.

    ರಾಜಕೀಯ ವಿವಿಯಂತಹ ಬಂಗಾರಪ್ಪ ಕೇವಲ ರಾಜಕಾರಣಿಯಾಗಿರದೇ ಕಲೆ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಯುವ ಪೀಳಿಗೆಗೆ ಅವರ ಜೀವನ ಮಾದರಿಯಾಗಬೇಕು. ಬಂಗಾರಪ್ಪ ಜನತೆಯಲ್ಲಿ ವಿಶ್ವಾಸ ಹೊಂದಿದ್ದರು. ಜನತೆ ಕೂಡ ಬಂಗಾರಪ್ಪ ಮೇಲೆ ವಿಶ್ವಾಸ ಹೊಂದಿದ್ದರಿಂದ ಉದ್ಯಾನಕ್ಕೆ ವಿಶ್ವಾಸಿಗರ ಕ್ಷೇತ್ರವೆಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

    ನಂತರ ಬಂಗಾರ ಧಾಮದಲ್ಲಿನ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು. ಪಪಂ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ.ಶೇಟ್, ಸದಸ್ಯರಾದ ಯು.ನಟರಾಜ್, ಪ್ರಭು ಮೇಸ್ತ್ರಿ, ಅನ್ಸರ್ ಅಹಮ್ಮದ್, ಜಯಲಕ್ಷ್ಮೀ, ಪ್ರೇಮಾ ಟೋಕಪ್ಪ, ಇಂಜಿನಿಯರ್ ಶಲ್ಜಾ, ಪ್ರಮುಖರಾದ ಸುಧೀರ್ ಪೈ, ಟೋಕಪ್ಪ ಪರಮೇಶ್ವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts