More

    ಸರ್ಕಾರಿ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯ ; ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿಕೆ ; ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾಗೃತಿ ರಥಕ್ಕೆ ಚಾಲನೆ

    ಕುಣಿಗಲ್ : ಬೆಳೆ ನಷ್ಟ ಪರಿಹಾರ ಸೇರಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ರೈತರೇ ಬೆಳೆಗಳ ಮಾಹಿತಿ ದಾಖಲಿಸಬಹುದು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.

    ವಾರ್ಕೋನಹಳ್ಳಿ ಜಲಾಶಯದ ಬಳಿ ಕೃಷಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ನನ್ನ ಬೆಳೆ, ನನ್ನ ಸಮೀಕ್ಷೆ ಕಾರ್ಯಕ್ರಮದಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾಗೃತಿ ರಥಕ್ಕೆ ಚಾಲನೆ ನೀಡಿ ವಾತನಾಡಿದರು. ರೈತರು ತಾವು ಬೆಳೆದ ಬೆಳೆಗಳನ್ನು ಕೃಷಿ ಉತ್ಪನ್ನ ವಾರುಕಟ್ಟೆ ಸೇರಿ ವಿವಿಧೆಡೆ ಬೆಂಬಲ ಬೆಲೆ ಯೋಜನೆಯಡಿ ವಾರಾಟ ವಾಡಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ಬೆಳೆ ನಷ್ಟ ಪರಿಹಾರ, ಸಲ್ ಬಿಮಾ ಯೋಜನೆ ವಿಮೆ ಸವಲತ್ತು ಸೇರಿ ಬ್ಯಾಂಕಿನಲ್ಲಿ ಕೃಷಿ ಸಾಲ ಸೌಲಭ್ಯಗಳಿಗೆ ಪೂರಕವಾಗಿದೆ ಎಂದು ಸಲಹೆ ನೀಡಿದರು.

    ಈ ಹಿಂದೆ ರೈತರ ಪಹಣಿಯಲ್ಲಿ ಬೆಳೆಗಳ ವಾಹಿತಿ ಸಮರ್ಪಕವಾಗಿ ದಾಖಲಾಗದೆ ಹತ್ತಾರು ವರ್ಷಗಳ ಕಾಲ ಪಹಣಿಯಲ್ಲಿ ಒಂದೇ ಬೆಳೆಯ ವಾಹಿತಿ ಲಭಿಸುತ್ತಿತ್ತು. ನೂತನ ತಂತ್ರಜ್ಞಾನದಿಂದ ಮಿಶ್ರ ಬೆಳೆ ಪದ್ಧತಿ ಅನುಸರಿಸುವ ರೈತರಿಗೂ ಅನುಕೂಲವಾಗಲಿದೆ ಎಂದರು.

    ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ವಾತನಾಡಿ, ಬೆಳೆ ಸಮೀಕ್ಷೆ ವ್ಯಾಪ್ತಿಗೆ ಕಂದಾಯ, ತೋಟಗಾರಿಕೆ, ಕೃಷಿ, ರೇಷ್ಮೆ ಹಾಗೂ ನೀರಾವರಿ ಇಲಾಖೆಗಳು ಬರಲಿವೆ. ತಾಲೂಕಿನ ಎಲ್ಲ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ರೈತರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಬೆಳೆ ಸಮೀಕ್ಷೆ ಕುರಿತ ವಾಹಿತಿ ರೈತರ ಮನವರಿಕೆಗೆ ಬರಬೇಕೆಂಬ ಕಾರಣಕ್ಕಾಗಿ ಸರ್ಕಾರ ರೈತರಿಂದ ಬೆಳೆ ಸಮೀಕ್ಷೆ ವಾಡಿಸುತ್ತಿದೆ. ಈ ಸಂಬಂಧ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ರೈತರ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

    ಎಡೆಯೂರು ಹೇವಾವತಿ ಎಇಇ ಜಯರಾಮಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಅಮೃತೂರು ಹರೀಶ್, ಮುಖಂಡ ನಂಜೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts