More

    ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

    ರೌಡಿಶೀಟರ್ ಒಂಟಿಕೊಪ್ಪಲಿನ ನಿವಾಸಿ ಚಂದ್ರು ಅಲಿಯಾಸ್ ಚಂದು ಹತ್ಯೆಯ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿರುವ ನಗರ ಪೊಲೀಸರು ಹಂತಕರ ಗುರುತನ್ನು ಕಲೆ ಹಾಕಿದ್ದಾರೆ.

    ಹಂತಕರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿದೆ ಎನ್ನಲಾಗಿದೆ. ದೇವು ಹತ್ಯೆಯ ಹಳೇ ವೈಷಮ್ಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಹತ್ಯೆ ಮಾಡಿದ ಗುಂಪಿನಲ್ಲಿ ಇರುವ ಹುಡುಗರು ಹೊಸಬರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಮರಣೋತ್ತರ ಪರೀಕ್ಷೆ ಬಳಿಕೆ ಅಂತ್ಯಕ್ರಿಯೆ

    ಹತ್ಯೆಯಾದ ರೌಡಿಶೀಟರ್ ಒಂಟಿಕೊಪ್ಪಲಿನ ನಿವಾಸಿ ಚಂದ್ರು ಅಲಿಯಾಸ್ ಚಂದು ಅಂತ್ಯಕ್ರಿಯೆ ನಗರದ ಗೋಕುಲಂನ 2ನೇ ಹಂತದ ಸ್ಮಶಾನದಲ್ಲಿ ಶುಕ್ರವಾರ ನೆರವೇರಿತು.

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ವಿವಿ ಮೊಹಲ್ಲಾದ ಅಂಡಾಳ್ ಮಂದಿರದ ರಸ್ತೆ, ವಾಲ್ಮೀಕಿ ರಸ್ತೆ, ಆದಿಪಂಪ ರಸ್ತೆ ಹಾಗೂ ಒಂಟಿಕೊಪ್ಪಲು, ಕಾಳಿದಾಸ ರಸ್ತೆಯಲ್ಲಿ ವಾಹನದಲ್ಲಿ ಮೆರವಣಿಗೆ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದ್ದರು. ಮೆರವಣಿಗೆಗೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿಯ ನಿಯೋಜನೆಯನ್ನು ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts