More

    ದ್ವೇಷ ಮರೆತರು ಕೈ ಕುಲುಕಿದರು

    ಬೆಂಗಳೂರು: ಮೈತ್ರಿ ಸರ್ಕಾರ ಪತನದ ನಂತರ ಹಾವು-ಮುಂಗುಸಿಯಂತಿದ್ದ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಘಟಾನುಘಟಿ ನಾಯಕರು ರಾಜಕೀಯ ದ್ವೇಷ ಮರೆತು ಕೈ ಕುಲುಕಿದರು. ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಭಾಷಣ ಮುಗಿಸಿದ ತರುವಾಯ ಪರಸ್ಪರ ವೈರಿಗಳಾಗಿದ್ದವರು ನಗುಮುಖದಿಂದ ಶುಭಾಶಯ ವಿನಿಯಮ ಮಾಡಿಕೊಂಡರು. ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.

    ಪಕ್ಷ ತೊರೆದು ಉಪಸಮರದಲ್ಲಿ ಗೆದ್ದು, ಸಚಿವರಾಗಿ ಅಧಿಕಾರ ವಹಿಸಿಕೊಂಡು ಮೊದಲ ಸಾಲಿನಲ್ಲಿ ಕುಳಿತಿದ್ದವರು ಪ್ರತಿಪಕ್ಷದ ಶಾಸಕರ ಬಳಿ ಬಂದು ನಗು ನಗುತ್ತ ಮಾತನಾಡಿದರು. ಸಚಿವರಾದ ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ ಮತ್ತಿತರ ನೂತನ ಸಚಿವರು ಜೆಡಿಎಸ್-ಕಾಂಗ್ರೆಸ್ ಶಾಸಕರ ಬಳಿಗೆ ಬಂದು ಕೈ ಕುಲುಕಿದರು.

    ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್ ತಮ್ಮ ಬಳಿ ಬಂದ ಸಚಿವ ಎಸ್.ಟಿ.ಸೋಮಶೇಖರ್ ಭುಜ ಕುಲುಕಿ ಶುಭ ಹಾರೈಸಿದರು. ಬಿ.ಸಿ.ಪಾಟೀಲ್, ಬೈರತಿ ಬಸವರಾಜ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಿಗೆ ಬಂದು ಕೆಲಕಾಲ ಆತ್ಮೀಯವಾಗಿ ಮಾತನಾಡಿದರು. ಕೋಮು ಪ್ರಚೋದಿಸುವ ಭಾಷಣ ಮಾಡಿ, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ಸೋಮಶೇಖರ ರೆಡ್ಡಿ ಪ್ರತಿಪಕ್ಷ ನಾಯಕರ ಬಳಿ ಬಂದು ಕುಶಲೋಪರಿ ವಿನಿಮಯ ಮಾಡಿಕೊಂಡರು. ರಾಜ್ಯಪಾಲರು ಭಾಷಣ ಮುಗಿಸಿ ತೆರಳುವಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್

    ಆಕರ್ಷಣೆ

    ಕೈಕುಲುಕಿದ್ದು, ವಿಶೇಷವಾಗಿ ಕಂಡು ಬಂತು. ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಪ್ರತಿಪಕ್ಷದ ಯಾವುದೇ ನಾಯಕರ ಬಳಿಯೂ ಮಾತನಾಡದೆ ತಮ್ಮ ಆಸನದಲ್ಲಿ ಕುಳಿತಿದ್ದರು.

    ಕೃಷಿ ಸಚಿವ ಬಿ.ಸಿ.ಪಾಟೀಲ್ ಹಸಿರು ಶಾಲು ಹೊದ್ದು ಗಮನಸೆಳೆದರು. ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ, ಶಿವರಾಮ ಹೆಬ್ಬಾರ್, ಪ್ರದೀಪ್ ಶೆಟ್ಟರ್ ಕೇಸರಿ ಶರ್ಟ್ ತೊಟ್ಟು ಬಂದಿದ್ದರು. -ಶಾಸಕಿ ವಿನಿಶಾ ನಿರೋ ಸ್ಕರ್ಟ್ ಮತ್ತು ಕೋಟ್ ಧರಿಸಿದ್ದರು. ನೂತನ ಸಚಿವ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಕಾಲಿಗೆ ನಮಸ್ಕರಿಸಿದರು. -ಮೈಸೂರಿನಲ್ಲಿ ಇತ್ತೀಚೆಗೆ ಹತ್ಯೆ ಯತ್ನಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಬಂದಿದ್ದ ಮಾಜಿ ಸಚಿವ ತನ್ವೀರ್ ಶೇಠ್ ಆರೋಗ್ಯವನ್ನು ಅನೇಕ ಶಾಸಕರು, ಸಚಿವರು ವಿಚಾರಿಸಿದರು.

    ನನ್ನೇಕೆ ಕಾಂಗ್ರೆಸ್​ಗೆ ಸೇರಿಸಿಕೊಂಡಿದ್ರು?

    ನನ್ನ ಮೇಲೆ ಆರೋಪಗಳಿರುವುದು ನಿಜ. ಆದರೆ ಆರೋಪಗಳು ನಿನ್ನೆ-ಮೊನ್ನೆಯಿಂದ ಇಲ್ಲ. ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗಿದ್ದೆ. ಆಗಲೂ ನನ್ನ ಮೇಲೆ ಇದೇ ಆರೋಪಗಳಿದ್ದವು. ಆಗ ಯಾಕೆ ನನ್ನನ್ನು ಕಾಂಗ್ರೆಸ್​ಗೆ ಸೇರಿಸಿಕೊಂಡರು ಎಂದು ಅರಣ್ಯ ಸಚಿವ ಆನಂದ್​ಸಿಂಗ್ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಗಳಿದ್ದರೆ ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಳ್ಳುವುದಿಲ್ಲ ಎಂದ ಆಗ ಹೇಳಬೇಕಿತ್ತು. ನನ್ನ ಮೇಲಿನ ಆರೋಪ ಸಾಬೀತಾಗಿಲ್ಲ. ಅನೇಕ ಪ್ರಕರಣ ಖುಲಾಸೆ ಆಗಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts