More

    ಬೇಡಿಕೆ ಈಡೇರಿಸಿ ಅಧಿಕೃತ ದಾಖಲೆ ನೀಡಲಿ

    ಸಾಗರ: ಕರ್ನಾಟಕ ಅರಣ್ಯಮೂಲ ಬುಡಕಟ್ಟು ಒಕ್ಕೂಟ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಗರ ಎಸಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಶನಿವಾರ 2ನೇ ದಿನಕ್ಕೆ ಕಾಲಿಟ್ಟಿತು. ಪೊಲೀಸ್ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಹೋರಾಟಗಾರರನ್ನು ಭೇಟಿ ಮಾಡಿ ಮಾಹಿತಿ ಪಡೆದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಣ್ಣ ಹಸಲರು ಧರಣಿ ಸ್ಥಳದಲ್ಲಿ ಅಡುಗೆ ತಯಾರಿಸಿ ಊಟ ಮಾಡಿದರು. ಬಳಿಕ ‘ವಿಜಯವಾಣಿ’ ಜತೆ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಂದು ನಮ್ಮ ಬೇಡಿಕೆ ಈಡೇರಿಸಿ ಅಧಿಕೃತ ದಾಖಲೆ ಬಿಡುಗಡೆಗೊಳಿಸುವವರೆಗೂ ಹೋರಾಟ ನಿರಂತರ ಎಂದು ತಿಳಿಸಿದರು.

    ಪಾರಂಪರಿಕ ಅರಣ್ಯಹಕ್ಕು ಕಾಯ್ದೆಯಡಿ ಬುಡಕಟ್ಟು ಸಮುದಾಯದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕಾನೂನಿನ ಪ್ರಕಾರ ಬುಡಕಟ್ಟು ಸಮುದಾಯಗಳಿಗೆ ಪ್ರಾಶಸ್ಱ ನೀಡಬೇಕು. ಬಹುತೇಕ ಕಡೆಗಳಲ್ಲಿ ಅವರಿಗೆ ಅಧಿಕಾರವನ್ನೇ ನೀಡಿಲ್ಲ. ವನವಾಸಿಗಳಿಗೆ ಮೊದಲು ಭೂಮಿ ಕೊಡಬೇಕೆನ್ನುವ ಕಾನೂನೇ ಇದೆ. ಸಾಗರ ತಾಲೂಕಿನ ತುಮರಿ, ಬ್ಯಾಕೋಡು, ಹೊಸಗದ್ದೆಯಲ್ಲಿ ನೆಪಮಾತ್ರಕ್ಕೆ ಒಂದಷ್ಟು ಭೂಮಿ ನೀಡಲಾಗಿದೆಯೇ ಹೊರತು ಬೇರೆಡೆ ಈ ಪ್ರಯತ್ನವೇ ಆಗಿಲ್ಲ ಎಂದು ದೂರಿದರು.

    ಆಳುವ ಸರ್ಕಾರಗಳು ತಳ ಸಮುದಾಯದ ಜನರ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಬಂದಿವೆ. ಅರಣ್ಯ ಇಲಾಖೆ ನಮಗೆ ನಿರಂತರ ಕಿರುಕುಳ ನೀಡುತ್ತಿದೆ. ಪೌಷ್ಟಿಕ ಆಹಾರ ವಿತರಣೆ ಕೂಡಲೇ ಆರಂಭವಾಗಬೇಕು. ಪಶ್ಚಿಮಘಟ್ಟ ಶ್ರೇಣಿಯಲ್ಲಿ ಬರುವ ನಮ್ಮ ಪ್ರದೇಶವನ್ನು ಸಮಗ್ರ ಗಿರಿಜನ ಅಭಿವೃದ್ಧಿ ಪ್ರದೇಶಾಭಿವೃದ್ಧಿ ಎಂದು ಘೊಷಿಸಿ ನಮ್ಮ ಜಿಲ್ಲೆಗೂ ಈ ಯೋಜನೆಯ ಕಾರ್ಯಕ್ರಮ ನೀಡಬೇಕು ಎಂದು ಒತ್ತಾಯಿಸಿದರು. ಬುಡಕಟ್ಟು ಒಕ್ಕೂಟದ ಲಕ್ಷ್ಮಮ್ಮ, ಗಂಗಾಧರ್, ನಾಗವೇಣಿ, ಶೈಲಜಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts