More

    ಗಾಯಾಳು ಮನೆಗೆ ಅರಣ್ಯಾಧಿಕಾರಿಗಳು ಭೇಟಿ

    ಹನಗೋಡು: ಕಾಡಂಚೀನ ಗ್ರಾಮಗಳಲ್ಲಿ ಮಾನವ -ವನ್ಯಜೀವಿ ಸಂಘರ್ಷ ಉಂಟಾಗುತ್ತಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಮನವಿ ಮಾಡಿದರು.

    ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ತಿಂಗಳ ಹಿಂದೆ ಹುಲಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ರಮೇಶ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಮಾನವ -ವನ್ಯಜೀವಿ ಸಂಘರ್ಷ ಉಂಟಾಗುತ್ತಿದ್ದು, ಕಾಡಂಚಿನಲ್ಲಿ ವಾಸವಿರುವ ರೈತರು ಜಾಗರೂಕತೆಯಿಂದ ಜೀವನ ನಡೆಸಬೇಕೆಂದು ಮನವಿ ಮಾಡಿದರು.

    ಗಾಯಾಳು ರಮೇಶ್ ಅವರಿಗೆ ಅರಣ್ಯ ಇಲಾಖೆಯಿಂದ ಈಗಾಗಲೇ ಚಿಕಿತ್ಸೆಗೆ ಸಹಾಯ ನೀಡಿದ್ದು, ಮುಂದೆಯೂ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆರ್‌ಎಫ್‌ಒ ಸುಬ್ರಮಣಿ, ಡಿಆರ್‌ಎಫ್‌ಒ ಮನೋಹರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts