More

    ಚಿರತೆ ಹಿಡಿಯಲು ಹೋದ ಅರಣ್ಯಾಧಿಕಾರಿ ಮೇಲೆ ಮುಗಿಬಿದ್ದ ಚಿರತೆ: ವಿಡಿಯೋ ವೈರಲ್​

    ಪಾಣಿಪತ್​: ಚಿರತೆ ಸೆರೆ ಹಿಡಿಯುವ ವೇಳೆ ಇಬ್ಬರು ಅರಣ್ಯಾಧಿಕಾರಿಗಳು ಗಾಯಗೊಂಡಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಇನ್ನು ಚಿರತೆ ಅರಣ್ಯಾಧಿಕಾರಿಯ ಮೇಲೆ ಮುಗಿಬಿದ್ದ ಭೀಕರ ದೃಶ್ಯ ಭಾರೀ ವೈರಲ್​ ಆಗುತ್ತಿದೆ.

    ಇಲ್ಲಿನ ಬೆಹ್ರಾಂಪುರ್ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಬಂದ ಅರಣ್ಯಾಧಿಕಾರಿಗಳ ಕಣ್ಣಿಗೆ ಚಿರತೆ ಏನೋ ಕಾಣಿಸಿತು. ಆದರೆ ಅದನ್ನು ಹಿಡಿಯುವಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದರಿಂದ ಅಧಿಕಾರಿಯ ಮೇಲೆಯೇ ಹಾರಿ ಗಾಯಗೊಳಿಸಿದೆ.

    ಚಿರತೆಯನ್ನು ಹಿಡಿದು ಬೋನಿಗೆ ಹಾಕುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅರಣ್ಯಾಧಿಕಾರಿ ಹಿಡಿಯಲು ಮುಂದಾಗುತ್ತಾರೆ. ಆ ವೇಳೆ ಅವರ ಮೇಲೆಯೇ ಎಗರಿ ಅವರನ್ನು ಕಚ್ಚುತ್ತಿರುವಾಗಲೇ ಚಿರತೆ ಬಾಲ ಹಿಡಿದು ಮತ್ತೊಬ್ಬ ಅಧಿಕಾರಿ ಎಳೆಯುತ್ತಾರೆ. ಕ್ರೋಧಗೊಂಡ ಚಿರತೆ ಅವರ ಮೇಲೂ ಎಗರಿ ಗಾಯಗೊಳಿಸಿದೆ. ತಕ್ಷಣ ಚಿರತೆಯನ್ನು ಹಿಡಿದು ಬೋನಿನೊಳಗೆ ಹಾಕಲಾಗಿದೆ.

    ಸದ್ಯ ಎಲ್ಲರ ಪ್ರಾಣ ಉಳಿದಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಹೊಣೆ ಹೊತ್ತಿದ್ದ ಅರಣ್ಯಾಧಿಕಾರಿ ಟ್ವೀಟ್​ ಮಾಡಿದ್ದಾರೆ.

    ಸದ್ಯ ಈ ಟ್ವೀಟನ್ನು 577.8 ಸಾವಿರ ಮಂದಿ ವೀಕ್ಷಿಸಿದ್ದು, 5 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ ಅರಣ್ಯಾಧಿಕಾರಿಗಳ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

    70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

    ಆಯ್ತಪ್ಪ ನಿಖಿಲ್​​ಕುಮಾರಸ್ವಾಮಿ ಸೋತು ಮೂರು ವರ್ಷ ಆಯ್ತು, ಈಗ್ಯಾಕೆ ಆ ವಿಷಯ?: ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts