More

    ಶ್ರೀಗಂಧ, ಬಿದಿರು ಬೆಳೆಯಲು ಸರ್ಕಾರದ ಉತ್ತೇಜನ

    ತರೀಕೆರೆ: ರೈತರು ಕೇವಲ ಅಡಕೆ ಬೆಳೆಯತ್ತ ಗಮನಹರಿಸುತ್ತಿದ್ದು, ಪರ್ಯಾಯ ಬೆಳೆಗಳತ್ತಲೂ ಆಸಕ್ತಿ ತೋರಬೇಕು. ಈ ದಿಸೆಯಲ್ಲಿ ಶ್ರೀಗಂಧ ಮತ್ತು ಬಿದಿರು ಬೆಳೆಯಲು ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ ಹೇಳಿದರು.

    ಹಳಿಯೂರು ಗ್ರಾಮದ ಸಮೀಪ ಗಂಧದಗುಡಿ ಭಾಗ-2ರಲ್ಲಿ ಬುಧವಾರ ಯಶಸ್ವಿ ಚಾರಿಟೆಬಲ್ ಟ್ರಸ್ಟ್, ಶ್ರೀಗಂಧ ರಕ್ಷಣಾ ವೇದಿಕೆ ಹಾಗೂ ರಾಜ್ಯ ರೈತ ಬಿದಿರು ಮತ್ತು ಶ್ರೀಗಂಧ ಬೆಳೆಗಾರರ ಸಂಘದಿಂದ ಆಯೋಜಿಸಿದ್ದ ಶ್ರೀಗಂಧದ ಮರಗಳ ಜನ್ಮದಿನಾಚರಣೆ ಮತ್ತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ಶ್ರೀಗಂಧ ರಕ್ಷಣೆ ಕಷ್ಟವಾದರೂ ಬೆಳೆಗಾರರಿಗೆ ಉತ್ತಮ ಆದಾಯ ಕೊಡುತ್ತದೆ. ಸಸ್ಯಕ್ಷೇತ್ರಗಳಲ್ಲಿ ಗುಣಮಟ್ಟದ ಶ್ರೀಗಂಧದ ಸಸಿಗಳನ್ನು ಬೆಳೆಸಲಾಗುತ್ತಿದೆ. ರೈತರು ಬೇಡಿಕೆ ಇರುವ ಆಯಾ ಗಿಡಗಳ ಮಾಹಿತಿಯನ್ನು ಸ್ಥಳೀಯ ಗ್ರಾಪಂನಲ್ಲಿ ಜುಲೈ ಮೊದಲ ವಾರದೊಳಗೆ ನೀಡಿದರೆ ಹೆಚ್ಚುವರಿ ಸಸಿ ಬೆಳೆಸಲು ಉಪಯುಕ್ತವಾಗಲಿದೆ. ಈಗಾಗಲೇ ತಾಲೂಕಿನಲ್ಲಿ ರೈತರಿಗೆ ಬಿದಿರು ಸಸಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಯುವ ಜನತೆಗೆ ಕೃಷಿ ಕ್ಷೇತ್ರದ ಬಗ್ಗೆ ತಾತ್ಸಾರ ಮಾಡುತ್ತಿದ್ದಾರೆ. ಪಾಲಕರು ಅವರಿಗೆ ಮಣ್ಣಿನ ಮಹತ್ವ ತಿಳಿಸಿ ಕೃಷಿ ಮಾಡಲು ಉತ್ತೇಜಿಸಬೇಕು ಎಂದರು.

    ಎಪಿಎಂಸಿ ಅಧ್ಯಕ್ಷ ಕೆ.ಎಂ.ಚಂದ್ರಶೇಖರಪ್ಪ ಮಾತನಾಡಿ, ರೈತರಿಗೆ ಸೂಕ್ತ ಮಾಹಿತಿ ಕೊರತೆ, ತಾಳ್ಮೆ ಇಲ್ಲದೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮುಂದಿನ ದಿನಗಳು ಕರಾಳವಾಗಿದ್ದು, ಪರಿಸರದ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts