More

    ಅಪರಾಧ ಪತ್ತೆಯಲ್ಲಿ ಫೋರೆನ್ಸಿಕ್ ಲ್ಯಾಬ್ ಪಾತ್ರ ಮಹತ್ತರ

    ಶಿವಮೊಗ್ಗ:ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಅಪರಾಧ ಕೃತ್ಯಗಳ ಸಾಕ್ಷಿ ಪತ್ತೆ ಹಚ್ಚಬಹುದು. ಆದರೆ ಅಪರಾಧ ಕೃತ್ಯಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಗೆ ನೆರವು ನೀಡಬಲ್ಲ ಮಹತ್ತರ ವಿಭಾಗ ಇದಾಗಿದೆ ಎಂದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಡಾ. ಎಸ್.ವಿ.ವಿಶ್ವನಾಥ್ ಹೇಳಿದರು.

    ಡಿವಿಎಸ್ ಕಾಲೇಜಿನ ರಾಸಾಯನ ಶಾಸ್ತ್ರ ವಿಭಾಗದಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಧಿ ವಿಜ್ಞಾನ ವಿಷಯದ ಕುರಿತು ಮಾತನಾಡಿ, ಅಪರಾಧ ಕೃತ್ಯಗಳು ನಡೆದ ಸಂದರ್ಭದಲ್ಲಿ ರಕ್ತದ ಮಾದರಿ ಮಹತ್ತರ ಪಾತ್ರ ವಹಿಸುತ್ತದೆ. ಕೂದಲಿನ ಮಾದರಿ ಹಾಗೂ ಲಭ್ಯವಿರುವ ಸಾಕ್ಷಿಗಳಿಂದ ಸಿಗುವ ಅಂಶಗಳ ಬಗ್ಗೆ ಪೊಲೀಸ್ ಇಲಾಖೆಗೆ ವರದಿ ನೀಡಬಹುದು. ಇದರಿಂದ ಬಹುತೇಕ ಪ್ರಕರಣಗಳ ಸುಲಭ ಪತ್ತೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
    ಡಿವಿಎಸ್ ಸಮಿತಿ ಜಂಟಿ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಮಹತ್ತರ ಅವಕಾಶಗಳಿವೆ. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಕ್ಷೇತ್ರದಲ್ಲಿ ಇರುವ ಅವಕಾಶಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಬೇಕು ಎಂದರು.
    ಖಜಾಂಚಿ ಬಿ.ಗೋಪಿನಾಥ್ ಮಾತನಾಡಿ, ಅಧ್ಯಯನ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧಕರ ಮಾರ್ಗದರ್ಶನ ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳು ಪರಿಣಿತರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೇಕು. ಮೊಬೈಲ್ ಹಾಗೂ ತಂತ್ರಜ್ಞಾನ, ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯದಿಂದ ಅಪರಾಧ ಕೃತ್ಯಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯ ಎಂದು ಹೇಳಿದರು.
    ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಪ್ರೊ. ಎನ್.ಕುಮಾರಸ್ವಾಮಿ, ಡಾ. ಎಂ.ಸಂತೋಷ್, ಡಾ. ಶಿವಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts