More

    ಭಾರತದ ಪ್ರವಾಸಕ್ಕೆಂದು ವಿದೇಶಗಳಿಂದ ಬಂದರು, ಲಾಕ್​ಡೌನ್​ನಲ್ಲಿ ಸಿಲುಕಿಕೊಂಡು ಗುಹೆ ಸೇರಿದರು… ಮುಂದೆ…!?

    ರಿಷಿಕೇಶ್​: ಅವರು ಫ್ರಾನ್ಸ್​, ಅಮೆರಿಕ, ಉಕ್ರೇನ್​, ಟರ್ಕಿ ಮತ್ತು ನೇಪಾಳದಿಂದ ಭಾರತದ ಪ್ರವಾಸಕ್ಕೆ ಬಂದಿದ್ದರು. ಅದರ ಭಾಗವಾಗಿ ಮಾರ್ಚ್​ 24ರಂದು ರಿಷಿಕೇಶವನ್ನು ತಲುಪಿದ್ದರು. ಅದರ ದುರದೃಷ್ಟಕ್ಕೆ ಕೋವಿಡ್​ 19 ಸೋಂಕು ತಡೆಗೆ ಮಾ.25ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಯಿತು.

    ಹಣ ಇರುವವರೆಗೂ ರಿಷಿಕೇಶದ ಮುನಿ ಕಿ ಬೇಟಿ ಪ್ರದೇಶದಲ್ಲಿನ ಹೋಟೆಲ್​ ಒಂದರಲ್ಲಿ ತಂಗಿದ್ದರು. ಆದರೆ, ಹಣ ಖಾಲಿಯಾಗುತ್ತಿರುವಂತೆ ಮೇ 3ರವರೆಗೆ ವಿಸ್ತರಣೆಗೊಂಡಿರುವ ಲಾಕ್​ಡೌನ್​ ಅವಧಿಯನ್ನು ಗುಹೆಯಲ್ಲಿ ಮುಂದುವರಿಸಲು ನಿರ್ಧರಿಸಿ, ಗುಹೆ ಸೇರಿಕೊಂಡಿದ್ದರು.
    ಈ ವಿಷಯ ಸ್ಥಳೀಯ ಪೊಲೀಸ್​ ಇನ್​ಸ್ಪೆಕ್ಟರ್​ ರಾಜೇಂದ್ರ ಸಿಂಗ್​ ಕಟಹಟ್​ ಗಮನಕ್ಕೆ ಬಂದಿತ್ತು. ತಕ್ಷಣವೇ ಗುಹೆಗೆ ಹೋದ ಅವರು ಅಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಸೂಕ್ತ ಆರೋಗ್ಯ ತಪಾಸಣೆಯ ಬಳಿಕ ಹತ್ತಿರದ ಸ್ವರ್ಗ್​ ಆಶ್ರಮದಲ್ಲಿ 14 ದಿನಗಳ ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.

    ಹಣ ಖಾಲಿಯಾಗಿದ್ದರಿಂದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ಪ್ರವಾಸಿಗರ ತಂಡ ಗುಹೆ ಸೇರಿತ್ತು. ನೇಪಾಳದ ವ್ಯಕ್ತಿ ಇವರಿಗೆ ಆಹಾರ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲು ನೆರವಾಗುತ್ತಿದ್ದ. ಇವರ ಪೈಕಿ ಯಾರಲ್ಲೂ ಕರೊನಾ ಸೋಂಕಿನ ಲಕ್ಷಣಗಳು ಕಂಡಬಂದಿಲ್ಲ. ಆದರೂ, 14 ದಿನಗಳ ಕ್ವಾರಂಟೈನ್​ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

    ಕರೊನಾ ಸೋಂಕು ತಗಲುವ ಮುನ್ನ ಜಾತಿ, ಮತ ಧರ್ಮಗಳನ್ನು ನೋಡುವುದಿಲ್ಲ… ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts