More

    ಕರೊನಾ ಸೋಂಕು ತಗಲುವ ಮುನ್ನ ಜಾತಿ, ಮತ ಧರ್ಮಗಳನ್ನು ನೋಡುವುದಿಲ್ಲ… ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಿ…

    ನವದೆಹಲಿ: ಕೋವಿಡ್​ 19 ಸೋಂಕು ತಗಲುವ ಮುನ್ನ ಜಾರಿ, ಮತ ಮತ್ತು ಧರ್ಮ, ಗಡಿ, ಭಾಷೆಗಳನ್ನು ನೋಡುವುದಿಲ್ಲ… ಎಲ್ಲರನ್ನೂ ಸಮಾನವಾಗಿ ಬಾಧಿಸುತ್ತದೆ… ಆದ್ದರಿಂದ, ಈ ಪಿಡುಗನ್ನು ತೊಲಗಿಸಲು ಎಲ್ಲರೂ ಒಗ್ಗಟ್ಟಿನಿಂದ ಆದ್ಯತೆಯ ಮೇರೆಗೆ ಸಹಕರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇತಿಹಾಸದ ಪುಟಗಳನ್ನು ನೋಡಿದಾಗ ಅಲ್ಲಿ ರಾಷ್ಟ್ರಗಳು ಇಲ್ಲವೇ ಸಮಾಜಗಳು ಪರಸ್ಪರ ತಿಕ್ಕಾಟಕ್ಕಿಳಿಯುತ್ತಿದ್ದವು. ಆದರೆ ಈಗ ಎಲ್ಲ ರಾಷ್ಟ್ರಗಳು, ಸಮಾಜಗಳು ಒಂದೇ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದ್ದರಿಂದ ಇಂಥ ಪಿಡುಗಗಳ ವಿರುದ್ಧದ ಭವಿಷ್ಯದ ಹೋರಾಟ ಎಲ್ಲವೂ ಏಕತೆ ಮತ್ತು ಸಮಭಾವವನ್ನು ಅವಲಂಬಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಾರತದಿಂದ ಹೊರಹೊಮ್ಮುವ ಹೊಸ ಹೊಳಹುಗಳು ಭಾರತ ಮಾತ್ರವಲ್ಲ, ಇಡೀ ಜಗತ್ತು ಮತ್ತು ಮಾನವಕುಲದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುವಂತಿರಬೇಕು ಎಂದು ಹೇಳಿದ್ದಾರೆ.

    ಹಿಂದೆ ಸರಕು ಸಾಗಣೆ ಎಂದರೆ ರಸ್ತೆ, ಉಗ್ರಾಣಗಳು, ಬಂದರು ಇತ್ಯಾದಿ ಮೂಲಸೌಕರ್ಯಗಳ ಅಭಿವೃದ್ಧಿಯ ದೃಷ್ಟಿಕೋನದಿಂದ ನೋಡಲಾಗುತ್ತಿತ್ತು. ಆದರೆ ಈಗ ಮನೆಯಲ್ಲೇ ಕುಳಿತು ಇಡೀ ಜಗತ್ತಿಗೆ ಸರಕುಗಳನ್ನು ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಈ ದೃಷ್ಟಿಯಿಂದ ಹೇಳುವುದಾದರೆ, ಕೋವಿಡ್​ 19 ಸೋಂಕಿನ ಸಮಸ್ಯೆ ಪರಿಹಾರವಾದ ನಂತರದಲ್ಲಿ ಜಟಿಲವಾದ ಅತ್ಯಾಧುನಿಕ ವಿತರಣಾ ಜಾಲದ ಕೇಂದ್ರಬಿಂದುವಾಗಿ, ವಿತರಣಾ ಜಾಲವನ್ನು ಸರಳೀಕರಿಸಲು ಭಾರತದ ಬಳಿ ಅಗತ್ಯವಾದ ಭೌತಿಕ ಮತ್ತು ವರ್ಚುಯಲ್​ ಸಾಮರ್ಥ್ಯಗಳಿವೆ. ಈ ಮುಕ್ತ ಅವಕಾಶವನ್ನು ನಮ್ಮ ಲಾಭಕ್ಕೆ ಬಳಸಿಕೊಳ್ಳುವ ಬಗ್ಗೆ ಭಾರತೀಯರೆಲ್ಲರೂ ಆಲೋಚಿಸಬೇಕು. ಮತ್ತು ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಮುಖಿಗಳಾಗಬೇಕು ಎಂದು ಸಲಹೆ ನೀಡಿದ್ದಾರೆ.
    https://www.vijayavani.net/till-date-rs-36659-crore-helicopter-money-distributed/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts