More

    ತಿಮ್ಮಪ್ಪನ ದರ್ಶನಕ್ಕಾಗಿ 2,150 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧದಂಪತಿ!

    ತಿರುಪತಿ: ಕಲಿಯುಗದ ವೈಕುಂಠದ ಅಧಿಪತಿ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯಕ್ಕಾಗಿ ವೃದ್ಧ ದಂಪತಿ ಸಾವಿರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದು, ಜನರ ಗಮನ ಸೆಳೆದರು.

    ಇದನ್ನೂ ಓದಿ: ಪ್ರಾಚೀನ ಆವಿಷ್ಕಾರ, ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ: ರಾಜ್ಯೋತ್ಸವಕ್ಕೆ ಪ್ರಧಾನಿ ಮೋದಿ ಶುಭಾಶಯ
    ಗುಜರಾತ್ ರಾಜ್ಯದ ದ್ವಾರಕಾ ನಗರದ ಡಾ.ಆರ್.ಉಪಾಧ್ಯಾಯ (74) ಮತ್ತು ಅವರ ಪತ್ನಿ ಸರೋಜಿನಿ (71) ಅವರು 2,150 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದು, ಅವರ ಭಕ್ತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

    ಇಷ್ಟಕ್ಕೂ ಈ ಇಳಿವಯಸ್ಸಿನಲ್ಲಿ ವೃದ್ಧದಂಪತಿ ಆರೋಗ್ಯವನ್ನೂ ಲೆಕ್ಕಿಸದೆ ಹಗಲಿರುಳು ಕಾಲ್ನಡಿಗೆಯಲ್ಲಿ ತಿರುಪತಿ ಯಾತ್ರೆ ಮಾಡುತ್ತಿರುವುದು ಯಾಕೆ ಎಂದು ಕೊಂಡಿರಿ? ಇಲ್ಲಿದೆ ತುಂಬಾ ಆಸಕ್ತಿಕರ ಸಂಗತಿ, ಮುಂದೆ ಓದಿ…

    ಉಪಾಧ್ಯಾಯ ಅವರ ತಾಯಿ ವೈದ್ಯಕೀಯ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ನಿಧನರಾದರು. ಅವರಿಗೆ ಜೀವನದಲ್ಲಿ ಒಮ್ಮೆಯಾದರೂ ತಿರುಪತಿ- ತಿರುಮಲೆಗೆ ಭೇಟಿಕೊಟ್ಟು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಬೇಕೆಂಬ ಆಸೆ ಇತ್ತು. ಆದರೆ ಕ್ಯಾನ್ಸರ್ ನಿಂದಾಗಿ ದೇಹ ಸಹಕರಿಸದ ಕಾರಣ ಆಕೆಯ ಆಸೆ ಈಡೇರಲಿಲ್ಲ.

    ಅತ್ತೆಯ ಹರಕೆ ಅರ್ಥಮಾಡಿಕೊಂಡ ಸೊಸೆ ಸರೋಜಿನಿ ತನ್ನ ಪತಿ ಉಪಾಧ್ಯಾಯರೊಂದಿಗೆ ಕಾಲ್ನಡಿಗೆಯಲ್ಲಿ ಹೋಗಿ ಬಾಲಾಜಿ ದರ್ಶನ ಮಾಡಲು ತೀರ್ಮಾನಿಸಿದರು. ಅದರಂತೆ 70 ದಿನಗಳ ಹಿಂದೆ 2,150 ಕಿ.ಮೀ ದೂರದ ತಿರುಮಲಕ್ಕೆ ಟೋಪು ಬಂಡಿಯೊಂದಿಗೆ (ಲಗೇಜ್‌ಗಾಗಿ) ಕಾಲ್ನಡಿಗೆಯಲ್ಲಿ ಹೊರಟರು. ಸ್ವಾಮಿಯ ಸನ್ನಿಧಿ ತಲುಪಲು 59 ದಿನ ಬೇಕಾಯಿತು.

    ತಿರುಪತಿಗೆ ಬಂದು ಏಳುಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಮತ್ತೆ ಕಾಲ್ನಡಿಗೆಯಲ್ಲೇ ಗುಜರಾತ್​ ನತ್ತ ವಾಪಸ್ಸಾದರು. ಏತನ್ಮಧ್ಯೆ ದರ್ಶನಕ್ಕೆ ಹೊರಡುವ ಮುನ್ನ ತಮ್ಮ ಪತ್ನಿ ಕಾಲು ಊತ ಮತ್ತು ಸುಸ್ತಿನಿಂದ ಬಳಲುತ್ತಿದ್ದರು. ಅವರಿಗೆ ಗ್ಲುಕೋಮಾ ಸಮಸ್ಯೆಯಿತ್ತು ಎಂದು ಉಪಾಧ್ಯಾಯ ಹೇಳಿದರು. ಸ್ವಾಮಿಯ ಮೇಲೆ ಭಾರ ಹಾಕಿ ಯಾತ್ರೆ ಆರಂಭಿಸಿದ್ದು, ಈಗ ಎಲ್ಲವೂ ಸರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಪತ್ನಿ ನಡೆಯಲು ಸಾಧ್ಯವಾಗದೇ ಇದ್ದಾಗ ತಳ್ಳುಗಾಡಿಯ ಮೇಲೆ ಕೂರಿಸಿ ಸ್ವಲ್ಪ ದೂರ ತಳ್ಳುತ್ತಿದ್ದೆ ಎಂದು ಉಪಾಧ್ಯಾಯ ಹೇಳಿದರು. ಅವರ ಹರಕೆ ತೀರಿಸಿದ ಪರಿ ಕಂಡು ಹಲವರು ಆಶ್ಚರ್ಯ ಪಡುತ್ತಾರೆ.

    ಮೈಸೂರಿನ ತಾಯಿ ಭುವನೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕನ್ನಡಾಂಬೆ ದೇಗುಲದ ವಿಶೇಷತೆಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts