More

    ದರ್ಜಿಗಳಿಗೆ ಆರ್ಥಿಕ ಸಹಾಯ ಮಾಡಿ

    ಸವದತ್ತಿ : ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಟೇಲರ್ (ದರ್ಜಿ) ಸಮುದಾಯಕ್ಕೂ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದು ಭಾವಸಾರ ಕ್ಷತ್ರೀಯ ಸಮುದಾಯದದ ಅಧ್ಯಕ್ಷ ಶಂಕರ ಇಜಂತಕರ ಹೇಳಿದ್ದಾರೆ.

    ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶುಕ್ರವಾರ ಭಾವಸಾರ ಕ್ಷತ್ರಿಯ ಸಮುದಾಯ ಮತ್ತು ನಾಮದೇವ ಸಿಂಪಿ ಸಮುದಾಯದ ವತಿಯಿಂದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಮಾತನಾಡಿದರು.

    ಸಮುದಾಯಗಳ ಮೂಲ ಕಸುಬು ಟೇಲರಿಂಗ್ ಆಗಿದ್ದು, ವಾರ್ಷಿಕ ವರಮಾನ 10 ರಿಂದ 12 ಸಾವಿರಗಳಷ್ಟಿರುತ್ತದೆ. ಕೆಲವೊಬ್ಬರು ಹೊಲಿಗೆ ಅಂಗಡಿಗಳಲ್ಲಿ ಕೆಲಸ ಮಾಡಿದರೆ ಇನ್ನೂ ಕೆಲವರು ಕಮೀಷನ್ ಆಧಾರದಲ್ಲಿ ಕೆಲಸ ಮಾಡುತ್ತಾರೆ.

    ಲಾಕ್‌ಡೌನ್‌ನಿಂದಾಗಿ ಸದ್ಯ ದರ್ಜಿಗಳ ಜೀವನ ಅತ್ಯಂತ ಕಷ್ಟದಲ್ಲಿದೆ. ಹಾಗಾಗಿ ಸರ್ಕಾರ ನೆರವಿಗೆ ನಿಲ್ಲಬೇಕು ಎಂದರು. ಸಾವಿರಾರು ಜನರು ಟೇಲರಿಂಗ್ ಉದ್ಯೋಗವನ್ನೇ ನಂಬಿಕೊಂಡಿದ್ದು, ಲಾಕ್‌ಡೌನ್‌ನಿಂದ ಅವರೆಲ್ಲರೂ ತೀವ್ರ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರವು ದರ್ಜಿಗಳಿಗೂ ಮಾಸಿಕ ಐದು ಸಾವಿರ ನೀಡಬೇಕು. ಸಾಂಪ್ರದಾಯಿಕ ವೃತ್ತಿ ನಂಬಿಕೊಂಡು ಜೀವನ ಸಾಗಿಸುತ್ತಿರುವ ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ವಿನಂತಿಸಿದರು. ಜ್ಞಾನೇಶ್ವರ ಅಮಠೆ, ಸತೀಶ ಸುತ್ರಾವೆ, ವೆಂಕಟೇಶ ಅಮಠೆ, ಗೋವಿಂದ ಅಮಠೆ, ಬಾಬು ಅಮಠೆ, ಸಂತೋಷ ತೊರಗಲ್ಲಮಠ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts