More

    ವಿದ್ಯಾರ್ಥಿಗಳಿಗೆ ಕೌಶಲ ಅವಶ್ಯ

    ಬೆಳಗಾವಿ: ನಗರದ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಪದವಿಪೂರ್ವ ಇಲಾಖೆ ಸಹಯೋಗದಲ್ಲಿ ಈಚೆಗೆ ಒಂದು ದಿನದ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

    ಅಂಗಡಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಮನಸ್ಸಿನ ನಿಯಂತ್ರಣ, ಕೌಶಲ ಮತ್ತು ವ್ಯಕ್ತಿತ್ವ ಬೆಳವಣಿಗೆ ವಿಷಯದ ಕುರಿತು ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಮಹಾದೇವ ಎಂ. ಕಾಂಬಳೆ ಮಾತನಾಡಿದರು.
    ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕಿ ಡಾ. ಸ್ಫೂರ್ತಿ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದರು.

    ಕಾರ್ಯಾಗಾರದಲ್ಲಿ ಪ್ರಥಮ ಅಧಿವೇಶನಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕ್ಲೀನ್‌ಕೋಡ್ ಕ್ಯೂರಿಯಾಸಿಟಿ ಐಟೆಕ್ ಪ್ರೈ. ಲಿಮಿಟೆಡ್ ವ್ಯವಸ್ಥಾಪಕ ಡಾ. ಶಿರೀಷ್ ಕೆರೂರ, ಡಾ. ಸೂರ್ಯಕುಮಾರ ಕನ್ಹಯ್ಯ, ವಿದ್ಯಾರ್ಥಿಗಳಿಗೆ ಮನಸ್ಸಿನ ಏಕಾಗ್ರತೆ ಹಾಗೂ ನಿಯಂತ್ರಣ ಕುರಿತು ಮಾತನಾಡಿದರು.
    ಪ್ರಾಚಾರ್ಯ ಸಂಗೀತಾ ದೇಸಾಯಿ, ಪ್ರೊ. ನಾಗೇಶ್ವರ ಡೇಮಿನಕೊಪ್ಪ, ಪ್ರೊ ದಾನೇಶ್ವರಿ ಎಸ್. ದುಂಡಗೆ, ಪ್ರೊ ಸಂತೋಷ ಹಾವರಗಿ, ಪ್ರೊ. ಸಂಜೀವ ಕುಮಾರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts