More

    ಕ್ವಾರಂಟೈನ್‌ಗಾಗಿ ವಸತಿ ನಿಲಯ ಬಳಕೆ

    ಬೆಳಗಾವಿ: ಕರೊನಾ ಸೋಂಕು ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕ್ವಾರಂಟೈನ್‌ಗಳಿಗಾಗಿ ಸರ್ಕಾರಿ ಸಭಾಂಗಣ, ಸರ್ಕಾರಿ ವಸತಿ ನಿಲಯಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಲಾಗಿದೆ.

    ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಹಳ್ಳಿಗಳಿಗೆ ಬರುತ್ತಿರುವ ಮತ್ತು ಬೇರೆ ಊರುಗಳಿಗೆ ವಲಸೆ ಹೋಗುತ್ತಿರುವವರನ್ನು 14 ದಿನಗಳ ವರೆಗೆ ಕ್ವಾರಂಟೈನ್‌ನಲ್ಲಿಡುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ 166 ವಸತಿ ನಿಲಯಗಳ ಜತೆಗೆ ವಿವಿಧ ಸರ್ಕಾರಿ ಕಟ್ಟಡಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತಿದೆ. ಸೋಂಕಿತರಿಗೆ ವಸತಿ, ಊಟ, ಉಪಚಾರ, ವೈದ್ಯಕೀಯ ಸೌಲಭ್ಯ, ಸ್ವಚ್ಛತೆ ಹಾಗೂ ಸುರಕ್ಷತೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

    ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 66 ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಹಾಗೂ ಹಿಂದುಳಿದ ವರ್ಗ ಇಲಾಖೆ ವ್ಯಾಪ್ತಿಯ 100 ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. ಸವದತ್ತಿ, ಬೈಲಹೊಂಗಲ, ಅಥಣಿ, ಚಿಕ್ಕೋಡಿ, ಬೆಳಗಾವಿ, ಖಾನಾಪುರ ಸೇರಿ ವಿವಿಧ ತಾಲೂಕಿನಲ್ಲಿ 7 ವಸತಿ ನಿಲಯಗಳನ್ನು ವಶಕ್ಕೆ ಪಡೆದು ಈ ನಿಲಯಗಳಲ್ಲಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅವಶ್ಯವಾದರೆ ಭವಿಷ್ಯದ ದಿನಗಳಲ್ಲಿ ಎಲ್ಲ ವಸತಿ ನಿಲಯಗಳನ್ನು ಕ್ಯಾರಂಟೈನ್‌ಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರದ ನಿರ್ದೇಶನದಂತೆ ಕರೊನಾ ಸೋಂಕಿತರನ್ನುಕ್ವಾರಂಟೈನ್‌ನಲ್ಲಿಡಲು ಸಮಾಜ ಕಲ್ಯಾಣ ಇಲಾಖೆಯ 7 ವಸತಿ ಶಾಲೆಗಳನ್ನು ನೀಡಲಾಗಿದೆ. ಅವಶ್ಯಬಿದ್ದರೆ ಎಲ್ಲ ವಸತಿ ನಿಲಯ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    |ಡಾ.ಉಮಾ ಸಾಲಿಗೌಡರ
    ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ

    ಕರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದಲೇ ವಿದೇಶ, ಬೇರೆ ರಾಜ್ಯ ಹಾಗೂ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹೋಗುತ್ತಿರುವವರನ್ನು ಮತ್ತು ಈಗಾಗಲೇ ಗ್ರಾಮೀಣ ಪ್ರದೇಶಗಳಿಗೆ ಆಗಮಿಸುವವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅವರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
    |ಡಾ.ಕೆ.ವಿ.ರಾಜೇಂದ್ರ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts