More

    ಪೊಲೀಸರಿಗೆ ಚವನ್‌ಪ್ರಾಶ್ ವಿತರಣೆ

    ಬೆಳಗಾವಿ: ಕರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಶಕ್ತಿ ಹೆಚ್ಚಿಸಲು ಬೆಳಗಾವಿ ಆಯುಷ್ ಇಲಾಖೆ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಚವನ್‌ಪ್ರಾಶ್ ವಿತರಿಸಲಾಯಿತು.

    ಈ ವೇಳೆ ಡಿಸಿಪಿ ಯಶೋದಾ ವಂಟಗೋಡಿ ಮಾತನಾಡಿ, ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿರುವ ಪೊಲೀಸರ ಆರೋಗ್ಯದ ಬಗ್ಗೆ ಆಯುಷ್ ಇಲಾಖೆ ಕಾಳಜಿ ತೋರುತ್ತಿದೆ. ಟ್ರಾಫಿಕ್ ಪೊಲೀಸರು ಒಂದೂವರೆ ತಿಂಗಳಿನಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರು ತಮ್ಮ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್ ಬಳಸಬೇಕು.

    ಆಯುಷ್ ಇಲಾಖೆ ನೀಡಿರುವ ಚವನ್‌ಪ್ರಾಶ್ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಸುರೇಶ ದೊಡವಾಡ, ವಿಭಾಗೀಯ ಆಯುಷ್ ನೋಡಲ್ ಅಧಿಕಾರಿ ಡಾ. ಶ್ರೀಕಾಂತ ಸುಣಧೋಳಿ, ಡಾ. ಚಂದ್ರಶೇಖರ ಸಿದ್ದಾಪುರ, ಡಾ. ಶಂಕರಲಿಂಗ ರಬಕವಿ, ಡಾ. ಬಸವರಾಜ ಜಂಡೆ ಹಾಗೂ ಆಯುಷ್ ಫೆಡರೇಷನ್ ಪದಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts