More

  ಮುತಾಲಿಕ್‌ಗೆ ಲೋಕಸಭಾ ಟಿಕೆಟ್ ನೀಡಿ

  ಬೆಳಗಾವಿ: ಹಿಂದುತ್ವ ಮತ್ತು ರಾಷ್ಟ್ರೀಯತೆಗಾಗಿ ಜೀವನ ಸವೆಸುತ್ತಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಹುಕ್ಕೇರಿ ತಾಲೂಕಿನ ಕ್ಯಾರಗುಡ್ಡ ಜ್ಞಾನಯೋಗಾಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

  ನಗರದ ಕನ್ನಡ ಸಾಹಿತ್ಯ ಭವನದ ಬಳಿ ಶನಿವಾರ ಜಮಾವಣೆಗೊಂಡಿದ್ದ ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದುಪರ ಸಂಘಟನೆ ಪದಾಧಿಕಾರಿಗಳು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಪರವಾಗಿ ಘೋಷಣೆ ಕೂಗಿದರು.

  ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಪಡೆದುಕೊಳ್ಳುವಲ್ಲಿ ಪ್ರಮೋದ ಮುತಾಲಿಕ್ ಅವರು ನಡೆಸಿದ ಸುದೀರ್ಘ ಹೋರಾಟ ಸಹ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಬಿಜೆಪಿ ಋಣ ತೀರಿಸುವ ಕೆಲಸ ಮಾಡಬೇಕಿದೆ. ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅವರು ನಡೆಸಿರುವ ಹೋರಾಟ ಸ್ಮರಣೀಯ. ಬಿಜೆಪಿಗೆ ನಿಜವಾಗಿಯೂ ಹಿಂದುಪರ ಕಾಳಜಿ ಇದ್ದರೆ ಮುತಾಲಿಕ್ ಅವರಿಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ನೀಡಿದರೆ, 3 ಲಕ್ಷ ಮತಗಳ ಅಂತರದ ಗೆಲುವಿನ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಬಸವರಾಜ ಬಾಳಿಕಾಯಿ ಮಾತನಾಡಿದರು. ಶ್ರೀರಾಮ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ವಿನಯ ಅಂಗರೋಳಿ, ಜಿಲ್ಲಾ ಪ್ರಮುಖರಾದ ರವಿ ಕುಕಿತ್ಕರ್, ಬಾಳು ಪವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ, ಸುರೇಶ ಭಜಂತ್ರಿ, ಬಸವರಾಜ ಬಾಳಿಕಾಯಿ, ದುರ್ಗಾ ಸೇನಾದ ಜಿಲ್ಲಾ ಪ್ರಮುಖ ಕವಿತಾ ಬೇವಿನಕಟ್ಟಿ, ಕಮಲಕ್ಕ ಜೇಡರ ಇತರರು ಇದ್ದರು.

  See also  ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts