More

    ಸ್ಥಳೀಯರಿಗೆ ಉದ್ಯೋಗ, ರಸ್ತೆ ದುರಸ್ತಿಗಾಗಿ ಧರಣಿ

    ಅಳವಂಡಿ: ವೈಬ್ರೆಂಟ್ ಎನರ್ಜಿ ಕಂಪನಿಯ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು, ಇವುಗಳ ದುರಸ್ತಿ ಹಾಗೂ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆಯಲ್ಲಿ ಶ್ರೀಸಿದ್ದೇಶ್ವರ ನಗರದ ಹತ್ತಿರ ಕಂಪನಿಯ ವಾಹನಗಳನ್ನು ತಡೆದು ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ:ಕೌಶಲ ತರಬೇತಿಯಿಂದ ಸ್ವಯಂ ಉದ್ಯೋಗ

    ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆಯ ಮಾರ್ಗ ಮದ್ಯದಲ್ಲಿನ ರೈತರ ಜಮೀನುಗಳಲ್ಲಿ ಪವನ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿದ್ದು, ಬಾರಿ ತೂಕದ ಮೆಷಿನ್‌ಗಳು, ಜಲ್ಲಿಕಲ್ಲು, ಮರಳು ಹಾಗೂ ಇತರ ಸಾಮಗ್ರಿಗಳನ್ನು ಹೊತ್ತ ಟಿಪ್ಪರಗಳು ಸಂಚರಿಸುತ್ತಿರುವುದರಿಂದ ರಸ್ತೆ ಡಾಂಬರು ಕಿತ್ತು ಹೋಗಿದೆ. ವಾಹನಗಳ ಅತಿ ವೇಗದ ಸಂಚರ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ.

    ಕಂಪನಿ ಈ ಭಾಗದಲ್ಲಿ ಸ್ಥಾಪನೆಯಾಗುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ, ಸ್ಥಳಕ್ಕೆ ಕಂಪನಿಯ ಅಧಿಕಾರಿಗಳನ್ನು ಕರೆಸಿಕೊಂಡು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

    ಸ್ಥಳಕ್ಕೆ ಆಗಮಿಸಿದ ವೈಬ್ರೆಂಟ್ ಎನರ್ಜಿ ಕಂಪನಿಯ ಸೈಟ್ ಮ್ಯಾನೇಜರ ಶಿವಕುಮಾರ, ಸ್ಥಳೀಯ ನಾಗರಿಕರ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಪರಿಹರಿಸಲಾಗುವುದು ಎಂದರು.

    ಪ್ರಮುಖರಾದ ಮಂಜುನಾಥ ಬೆದವಟ್ಟಿ, ಸತೀಶ ಜಾಣಗಾರ, ರಾಮಕೃಷ್ಣ ಬೆಳಗಿ, ಬಸವರಾಜ, ಮಹಾಂತೇಶ, ಸೋಮಪ್ಪ, ರಂಗಪ್ಪ, ಮಲ್ಲೇಶ, ಸಂತೋಷ, ರಮೇಶ, ಹುಲಿಗೆಮ್ಮ, ಶರಣಪ್ಪ, ಬಸಣ್ಣ, ರಮೇಶ, ಉಮೇಶಗೌಡ್ರ, ಕೊಟ್ರಪ್ಪ, ಮಹೇಶ, ಕೊಟೆಪ್ಪ ಇತರರಿದ್ದರು.


    ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆಯಲ್ಲಿ ವೈಬ್ರೆಂಟ್ ಎನರ್ಜಿ ಕಂಪನಿಯ ವಾಹನಗಳು ಸಂಚರದಿಂದ ರಸ್ತೆ ಹಾಳಾಗುತ್ತಿದೆ. ಕಂಪನಿಯಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡಬೇಕೆನ್ನುವುದೆ ನಮ್ಮ ಆಶಯ, ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ. ಪರಿಹಾರ ಸಿಗದಿದ್ದಲ್ಲಿ ಮತ್ತೆ ಹೋರಾಟ ಕೈಗೊಳ್ಳುವೆವು.
    ರಾಮಕೃಷ್ಣ ಬೆಳಗಿ, ಗ್ರಾಮಸ್ಥ ಶ್ರೀಸಿದ್ದೇಶ್ವರ ನಗರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts