More

    ನೀರಾವರಿಗಾಗಿ ಹೋರಾಟ ನಿರಂತರ

    ಚನ್ನಮ್ಮ ಕಿತ್ತೂರು: ಈ ಭಾಗದ ನೀರಾವರಿ ಯೋಜನೆ ಜಾರಿಗೆಗೆ ಎಷ್ಟೇ ಕಷ್ಟಗಳು ಎದುರಾದರೂ ಸಹ ಅವುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

    ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಶುಕ್ರವಾರ ಕಿತ್ತೂರು ರಾಣಿಚನ್ನಮ್ಮಾಜಿ ನೀರಾವರಿ ಅಭಿವೃದ್ಧಿ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 249 ಕೋಟಿ ರೂ. ನೀರಾವರಿ ಯೋಜನೆ ಪ್ರಗತಿಯಲ್ಲಿದೆ. ನಮ್ಮ ಗುರಿ ಮುಟ್ಟುವವರೆಗೆ ಎಷ್ಟೇ ಕಷ್ಟಗಳು ಬಂದರೂ ಸಹ ಹೋರಾಟ ಮುನ್ನಡೆಯಬೇಕು ಎಂದರು.

    ಸಮಿತಿ ಅಧ್ಯಕ್ಷ ಹಬೀಬ್ ಶಿಲೇದಾರ ಮಾತನಾಡಿ, ಈ ಭಾಗದಲ್ಲಿ ನೀರಾವರಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಮಲಪ್ರಭಾ ನದಿ ನೀರನ್ನು ಕಿತ್ತೂರ ಕ್ಷೇತ್ರದ ನಾಡಿನ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಯೋಜನೆಗಳು ತಯಾರಾಗಬೇಕು. ಕ್ಷೇತ್ರದ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಇದಕ್ಕೆ ಸರ್ಕಾರ, ಶಾಸಕರ ಸಹಕಾರ ಅಗತ್ಯವಾಗಿದೆ ಎಂದರು.

    ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಶಾಸಕರು ಕ್ರೀಯಾಶಿಲ ವ್ಯಕ್ತಿಯಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನೀರಾವರಿ ಯೋಜನೆಗೆ ಪ್ರಮುಖ ಆದ್ಯತೆ ನೀಡಲು ಶ್ರಮಿಸಬೇಕು ಎಂದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ ದೇಶಪಾಂಡೆ, ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಎಂ.ಎಫ್. ಜಕಾತಿ, ಅಶೋಕ ಯಮಕನಮರಡಿ, ಜಯಶ್ರೀ ಗುರಣ್ಣವರ, ಮಹಾದೇವ ತಳವಾರ ಹಾಗೂ ಬಸನಗೌಡ ಸಿದ್ರಾಮಣಿ, ಪಂಚಾಕ್ಷರಿ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ, ದೇವರಶಿಗಿಹಳ್ಳಿಯ ಮಹಾಸ್ವಾಮಿಗಳು,
    ಮಹಾಂತೇಶ ಗಜಪತಿ, ಉಮಾದೇವಿ ಬಿಕ್ಕಣ್ಣವರ ಇತರರು ಇದ್ದರು. ಪ್ರದೀಪ ಮೇಲಿನಮನಿ ಸ್ವಾಗತಿಸಿದರು. ಅಬ್ದುಲ್‌ಲ್ ಮುಲ್ಲಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts