More

    ಹನಿಟ್ರಾೃಪ್‌ಗೆ ಯತ್ನ, ಮೂವರು ಮಹಿಳೆಯರು ಸೇರಿ ಐವರ ಬಂಧನ

    ಬೆಳಗಾವಿ: ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡು ಹನಿಟ್ರಾೃಪ್ ಮೂಲಕ ಹಣ ವಸೂಲಿಗೆ ಇಳಿದಿದ್ದ ಖತರ್ನಾಕ್ ಗ್ಯಾಂಗ್‌ವೊಂದನ್ನು ಖೆಡ್ಡಾಕ್ಕೆ ಕೆಡವಿರುವ ಮಾಳಮಾರುತಿ ಠಾಣೆ ಪೊಲೀಸರು, ಮೂವರು ಮಹಿಳೆಯರು ಸೇರಿ ಐವರನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ. ಸ್ಥಳೀಯ ನೆಹರು ನಗರ ನಿವಾಸಿ ರಘುನಾಥ ದುಮ್ಮಾಳೆ, ಸವದತ್ತಿಯ ಮಂಜುಳಾ ಜಟ್ಟೆಣ್ಣವರ, ಗೌರಿ ಲಮಾಣಿ, ಉಗರಗೋಳದ ಸಂಗೀತಾ ಕಣಕಿಕೊಪ್ಪ, ಅಥಣಿಯ ಸದಾಶಿವ ಚಿಪ್ಪಲಕಟ್ಟಿ ಬಂಧಿತರು. ಐವರು ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಬಸವರಾಜ ಎಂಬಾತನನ್ನು ಬಲೆಗೆ ಬೀಳಿಸಿ, 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 5 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದರು. ಹಣದ ಬೇಡಿಕೆ ಬಂದ ತಕ್ಷಣವೇ ಬಸವರಾಜ ಪೊಲೀಸರಿಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿದೆ.

    ಪೊಲೀಸರ ಮಾರ್ಗದರ್ಶನದಂತೆ ‘ನಾನೂ ಹಣ ನೀಡುತ್ತೇನೆ. ನೆಹರು ನಗರದ ಖಾಸಗಿ ಹೋಟೆಲ್‌ಗೆ ಬನ್ನಿ’ ಎಂದು ವಂಚಕರಿಗೆ ಬಸವರಾಜ ತಿಳಿಸಿದ್ದಾನೆ. ಹಣದಾಸೆಗಾಗಿ ಅಲ್ಲಿಗೆ ಬಂದವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಐವರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ ಯೂಟ್ಯೂಬ್ ಚಾನೆಲ್ ಎಂದು ಬರೆದಿರುವ ಗುರುತಿನ ಚೀಟಿ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts