More

    ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ

    ಬೆಳಗಾವಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಪರಿಕರ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣಿ ತಿಳಿಸಿದ್ದಾರೆ.

    ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರಗಳಾದ ಕಾಕತಿ, ಉಚಗಾಂವ, ಹಿರೇಬಾಗೇವಾಡಿ ಹಾಗೂ ಹೆಚ್ಚುವರಿಯಾಗಿ ನಂದಿಹಳ್ಳಿ, ಬೆಳಗುಂದಿ, ಮಾರೀಹಾಳ, ಮುತ್ನಾಳ, ಮೋದಗಾ, ಹಲಗಾ, ಬೆಂಡಿಗೇರಿ, ಕೆ.ಕೆ.ಕೊಪ್ಪ, ಬಡಾಲ ಅಂಕಲಗಿ ಪಿಕೆಪಿಎಸ್ ಸಂಘಗಳಲ್ಲಿ ರಿಯಾಯಿತಿ ಬಿತ್ತನೆ ಬೀಜ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

    ರೈತರು ಅಗತ್ಯ ದಾಖಲೆ ಒದಗಿಸಿ ಬೀಜ ಪಡೆಯಬಹುದಾಗಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 48,500 ಹೆಕ್ಟೇರ್ ಕ್ಷೇತ್ರ ಬಿತ್ತನೆ ಗುರಿ ಹೊಂದಲಾಗಿದೆ. ಅವುಗಳ ಪೈಕಿ ಪ್ರಮುಖ ಬೆಳೆಗಳಾದ ಭತ್ತ 25,000 ಹೆಕ್ಟೇರ್, ಸೋಯಾಬೀನ್ 9,000 ಹೆಕ್ಟೇರ್, ಕಬ್ಬು 9,000 ಹೆಕ್ಟೇರ್ ಗುರಿ ಹೊಂದಲಾಗಿದೆ.

    ವಿವಿಧ ತಳಿಗಳಾದ ಜಯಾ, ಐ.ಆರ್-64, ಇಂಟಾನ್ ಇತರೆ ಬೀಜ 100 ಕ್ವಿಂಟಾಲ್ ಹಾಗೂ ಸೋಯಾಬೀನ್ 3,000 ಕ್ವಿಂಟಾಲ್‌ನಷ್ಟು ಹಂಚಿಕೆಯ ಗುರಿ ಇಟ್ಟುಕೊಳ್ಳಲಾಗಿದ್ದು, ದಾಸ್ತಾನು ಪ್ರಾರಂಭಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts