More

    ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಅವಶ್ಯ

    ಹರಪನಹಳ್ಳಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಲಿವೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಾಮನಗೌಡ ತಿಳಿಸಿದರು.

    ಇದನ್ನೂ ಓದಿ: ಮಕ್ಕಳು ಪಠ್ಯೇತರ ಚಟುವಟಿಕೆಗಳಲೂ ಭಾಗವಹಿಸುವಂತಾಗಲಿ

    ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮಾತನಾಡಿದರು.
    ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎಂ.ಎಂ.ಮೃತ್ಯುಂಜಯ ಮಾತನಾಡಿ,

    ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಹಿತ್ಯ ಅಭ್ಯಾಸ ಮಾಡಿ, ಸಾಹಿತ್ಯದ ಅಭ್ಯಾಸದಿಂದ ಮನಸ್ಸಿಗೆ ಆನಂದ, ಶಬ್ದ ಸಂಪತ್ತು ವೃದ್ಧಿಗೊಳ್ಳುತ್ತದೆ, ಉತ್ತಮ ಮನುಷ್ಯನಾಗಿ ಹೊರಹೊಮ್ಮಲು ಸಾಧ್ಯ ಎಂದರು.

    ವಿ.ವಿ.ಸಂಘದ ಸಹಕಾರ್ಯದರ್ಶಿ ಶಾಂತನಗೌಡ, ಎಡಿಬಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೋರಿವಿರುಪಾಕ್ಷಪ್ಪ, ಜಾನೆಕುಂಟೆ ಸಣ್ಣ ಬಸವರಾಜ ಪ್ರಾಚಾರ್ಯ ಡಾ.ಸಿದ್ಧಲಿಂಗಮೂರ್ತಿ ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts