More

    ಮಕ್ಕಳಿಗೆ ವಿಷಯ ಮನ ಮುಟ್ಟುವಂತೆ ಬೋಧಿಸಿ

    ಅಳವಂಡಿ: ನಿರಂತರ ಬರವಣಿಗೆ ಮೂಲಕ ಕಠಿಣ ಅಭ್ಯಾಸ ಮಾಡಿದರೆ ಗಣಿತ ಸುಲಭವಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್ ಹೇಳಿದರು.


    ಸಮೀಪದ ಬಿಸರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಅಕ್ಷರ ಫೌಂಡೇಶನ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಪರೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ ಅಲ್ಲ ಬೇರೆ ವಿಷಯಗಳಿಗಿಂತ ಹೆಚ್ಚು ಶ್ರಮವಹಿಸಿ ಅಭ್ಯಾಸ ಮಾಡಿದರೆ ಸರಳವಾಗಿ ಅರ್ಥವಾಗುತ್ತದೆ. ಶಿಕ್ಷಕರು ಪ್ರಯೋಗ ಮೂಲಕ ಮಕ್ಕಳಿಗೆ ವಿಷಯ ಮನ ಮುಟ್ಟುವಂತೆ ಬೋಧಿಸಬೇಕು ಎಂದರು.


    ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪಿಡಿಒ ಬಸವರಾಜ ಕೀರ್ದಿ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ದ್ಯಾವಣ್ಣವರ, ಸಿಆರ್‌ಪಿ ಬಸವರಾಜ, ಶಿಕ್ಷಕರಾದ ಶಿವಪ್ಪ ಅಯ್ಯನಗೌಡರ, ಈರಣ್ಣ ಕೋನಸಾಗರ, ಬಸವರಾಜ ಸಜ್ಜನ, ಲಕ್ಷ್ಮೀ ಕುಲಕರ್ಣಿ, ರಮೇಶ ಬುಡ್ಡನಗೌಡರ, ಪ್ರಕಾಶ ತಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts