More

    ಮಕ್ಕಳಿಗೆ ಪುಸ್ತಕದ ರುಚಿ ಉಣಬಡಿಸಿ

    ಚಿಕ್ಕೋಡಿ: ದೇವಾಲಯ ಕಟ್ಟುವುದಕ್ಕಿಂತ ಗ್ರಂಥಾಲಯ ನಿರ್ಮಿಸುವುದು ಮುಖ್ಯ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

    ತಾಲೂಕಿನ ಬೆಳಕೂಡ ಗ್ರಾಮದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರ ರಾಜ್ಯಸಭೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಪಾಲಕರು ಮಕ್ಕಳಿಗೆ ಓದಿನ ರುಚಿ ಉಣಬಡಿಸಬೇಕು ಎಂದು ಸಲಹೆ ನೀಡಿದರು. ಇಂದು ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಆನ್‌ಲೈನ್ ಮೂಲಕ ಅಭ್ಯಾಸ ಮಾಡುವ ಕಾಲ ಬಂದಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಿಯಲು ಅನುಕೂಲವಾಗಲೆಂದು ಬೆಳಕೂಡ ಸಾರ್ವಜನಿಕ ಗ್ರಂಥಾಲಯಕ್ಕೆ ಎರಡು ಕಂಪ್ಯೂಟರ್ ನೀಡುವುದಾಗಿ ಭರವಸೆ ನೀಡಿದರು. ಟಿ.ಎಸ್.ಮೋರೆ, ಆರ್.ಡಿ.ಸಂಕಣ್ಣವರ, ಚಂದ್ರಶೇಖರ ಅರಬಾವಿ, ಮಹಾಂತೇಶ ಯಶವಂತ, ಬಸವರಾಜ ಪಾಶ್ಚಾಪುರೆ, ನಂದಕುಮಾರ ಖಟಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts